ಸನ್ಮಾರ್ಗ ವಾರ್ತೆ
ಹೈದರಾಬಾದ್,ಆ.4: ತೆಲಂಗಾಣದ ಭದ್ರಾಚಲಂ ಕ್ಷೇತ್ರದ ಮಾಜಿ ಶಾಸಕ ಸಿಪಿಎಂ ನಾಯಕರೂ ಆದ ಸುನ್ನಂ ರಾಜಯ್ಯ(68) ಕೊರೋನದಿಂದ ನಿಧನರಾದರು. ಕಳೆದ ದಿವಸ ಅವರಿಗೆ ಕೊರೋನ ಇರುವುದು ದೃಢಪಟ್ಟಿತ್ತು. ಹೈದರಾಬಾದಿನಿಂದ ವಿಜಯವಾಡದ ಆಸ್ಪತ್ರೆಗೆ ಕರೆ ತಂದರೂ ಜೀವ ಉಳಿಸಲು ಸಾಧ್ಯವಾಗಿಲ್ಲ.
ಭದ್ರಾಚಲಂ ವಿಧಾನಸಭೆಯಿಂದ ಅವರು 1999, 2004, 2014ರಲ್ಲಿ ಆಯ್ಕೆಯಾಗಿ ವಿಧಾನಸಭೆ ಪ್ರವೇಶಿಸಿದ್ದರು. ಕಳೆದ ಬಾರಿ ಆಂಧ್ರ ಪ್ರದೇಶದ ರಾಮಪಚೋದವರಂ ವಿಧಾನಸಭೆಯಿಂದ ಸ್ಪರ್ಧಿಸಿದ್ದರೂ ಸೋಲುಂಡಿದ್ದರು.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












