ಅಯೋಧ್ಯೆ ಮಂದಿರ ನಿರ್ಮಾಣ ಕಾರ್ಯ ಟ್ರಸ್ಟಿನದ್ದೇ ಹೊರತು ಸರಕಾರದ್ದಲ್ಲ: ಕಮ್ಯೂನಿಸ್ಟ್ ಪಾರ್ಟಿ ಟೀಕೆ

0
537

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಆ.4: ಅಯೋಧ್ಯೆಯ ರಾಮಮಂದಿರ ನಿರ್ಮಾಣವನ್ನು ಕೇಂದ್ರ ಹಾಗೂ ಉತ್ತರ ಪ್ರದೇಶ ಸರಕಾರಗಳು ವಹಿಸಿಕೊಂಡಿರುವುದನ್ನು ಸಿಪಿಎಂ ಟೀಕಿಸಿದೆ.

ಇದು ಸುಪ್ರೀಂಕೋರ್ಟಿನ ತೀರ್ಪಿನ ಉಲ್ಲಂಘನೆ, ವಿಷಯಗಳನ್ನು ರಾಮ ಮಂದಿರ ಟ್ರಸ್ಟ್ ತೀರ್ಮಾನಿಸಬೇಕಾಗಿದೆ ಎಂದು ಸಿಪಿಎಂ ಪೊಲಿಟ್‍ ಬ್ಯೂರೊ ತಿಳಿಸಿದೆ.

ಅಯೋಧ್ಯೆ ವಿವಾದ ಉಭಯ ಕಕ್ಷಿ ಸಮ್ಮತದಲ್ಲಿ ಅಥವಾ ಕೋರ್ಟ್ ತೀರ್ಪಿನಿಂದ ಬಗೆಹರಿಸಬೇಕೆಂಬುದು ಸಿಪಿಎಂ ನಿಲುವಾಗಿತ್ತು. ಮಂದಿರ ನಿರ್ಮಾಣದ ಹೊಣೆವಹಿಸಿಕೊಳ್ಳಲು ರಾಮ ಮಂದಿರ ಟ್ರಸ್ಟ್‌ಅನ್ನು ಸುಪ್ರೀಂಕೋಟು ನಿರ್ದೇಶಿಸಿದೆ.

1992 ಡಿಸೆಂಬರ್ 6ಕ್ಕೆ ಬಾಬರಿ ಮಸೀದಿ ಧ್ವಂಸ ಮಾಡಿದ್ದು ಕ್ರಿಮಿನಲ್ ಅಪರಾಧವಾಗಿ ಕೋರ್ಟು ಖಂಡಿಸಿತ್ತು. ಇದರಲ್ಲಿ ಅಪರಾಧಿಗಳನ್ನು ಶಿಕ್ಷಿಸುವ ಬದಲು ಧ್ವಂಸಕ್ಕೆ ಕಾನೂನು ಸಿಂಧುತ್ವ ನೀಡುವ ರೀತಿ ಕೇಂದ್ರ -ರಾಜ್ಯ ಸರಕಾರಗಳು ವರ್ತಿಸುತ್ತಿವೆ ಎಂದು ಸಿಪಿಎಂ ಆರೋಪಿಸಿದೆ.

ದೇಶದಲ್ಲಿ ಕೊರೋನ ಹರಡುವ ಸಮಯ ಇದು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕೋವಿಡ್ ಪ್ರೊಟೊ ಕಾಲ್ ಪಾಲಿಸುವ ನಿರ್ದೇಶ ಕೇಂದ್ರ ಸಚಿವ ಸಂಪುಟವೇ ನೀಡಿದೆ. ಸಂವಿಧಾನದ ಮೌಲ್ಯ ಮತ್ತು ಜಾತ್ಯತೀತತೆ ಹಾಗೂ ನೀತಿಯನ್ನು ಎತ್ತಿ ಹಿಡಿಯಬೇಕು. ಕೊರೋನ ಪ್ರತಿರೋಧದ ಕ್ರಮಗಳನ್ನು ಪಾಲಿಸಬೇಕು ವಿಭಜನಾ ರಾಜಕೀಯಕ್ಕಾಗಿ ಧಾರ್ಮಿಕ ಭಾವನೆಗಳನ್ನು ದುರುಪಯೋಗಿಸಬಾರದೆಂದು ಸಿಪಿಎಂ ಹೇಳಿಕೆ ನೀಡಿ ಆಗ್ರಹಿಸಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.