ಸನ್ಮಾರ್ಗ ವಾರ್ತೆ
ಅಂಚಲುಂಮೂಡ್, 7: ಎರಡು ತಿಂಗಳಿನಿಂದ ಸಂಬಳ ಸಿಗದ ಕಾಂಞಲವಳ್ಳಿ ಎಂಬಲ್ಲಿನ ಅನುದಾನರಹಿತ ಶಾಲೆಯ ಅಧ್ಯಾಪಕಿ ಶಾಲೆಯ ಮುಂದೆ ಕೈ ನರಕತ್ತರಿಸಿ ಆತ್ಮಹತ್ಯೆಗೆ ಶ್ರಮಿಸಿದ್ದಾರೆ.
ಕಾಂಞಳವಳ್ಳಿ ಮಹಾತ್ಮ ಮೋಡಲ್ ಸ್ಕೂಲಿನ ಪ್ರಥಮಾಧ್ಯಪಕಿ ಸುಚಿತ್ರ ಬೆಳಗ್ಗೆ ಹನ್ನೊಂದು ಗಂಟೆಗೆ ಶಾಲೆಯ ಮುಂದೆ ನಡೆಯುತ್ತಿದ್ದ ಪ್ರತಿಭಟನೆ ವೇಳೆಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಪ್ರತಿಭಟನೆಯಲ್ಲಿದ್ದ ಶಾಲೆಯ ಇತರ ಅಧ್ಯಾಪಕರು ಇವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಸೇರಿಸಿದರು. ಎರಡು ತಿಂಗಳಿನಿಂದ ಸಂಬಳ ಮತ್ತು ಇತರ ಸೌಲಭ್ಯಗಳು ನೀಡಬೇಕೆಂದು ಆಗ್ರಹಿಸಿ ಅಧ್ಯಾಪಕರು ಹೋರಾಟ ನಡೆಸುತ್ತಿದ್ದಾರೆ.
ಮ್ಯಾನೇಜ್ಮೆಂಟ್ ಅಧ್ಯಾಪಕರ ಸಂಘಟನೆಯೊಂದಿಗೆ ಚರ್ಚಿಸಿದರೂ ನಕಾರಾತ್ಮಕ ನಿಲುವನ್ನು ಸ್ವೀಕರಿಸಿದ್ದಾರೆ ಎಂಬ ದೂರುಗಳಿವೆ. ಘಟನೆಯನ್ನು ಅರಿತು ಪಂಚಾಯತ್ ಅಧ್ಯಕ್ಷರ ನೇತೃತ್ವದಲ್ಲಿ ಮ್ಯಾನೇಜ್ಮೆಂಟಿನೊಂದಿಗೆ ಚರ್ಚಿಸಿದರೂ ಶಾಲಾಡಳಿತ ಸಂಬಳ ನೀಡಲು ತಯಾರಾಗಿಲ್ಲ. ನಂತರ, ಡಿವೈಎಫ್ಐ ಕಾಯಕರ್ತರು ಮುತ್ತಿಗೆ ಹಾಕಿದರು.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












