ಅಯೋಧ್ಯೆ ರಾಮಮಂದಿರ ಟ್ರಸ್ಟ್ ಗೆ 21,000 ರೂ. ದೇಣಿಗೆ ನೀಡಿದ ಹಾರ್ದಿಕ್ ಪಟೇಲ್

0
687

ಸನ್ಮಾರ್ಗ ವಾರ್ತೆ

ಅಹ್ಮದಾಬಾದ್, ಆ. 6: ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಶಿಲಾನ್ಯಾಸ ನಡೆದ ಬೆನ್ನಿಗೆ ಮಂದಿರ ನಿರ್ಮಾಣಕ್ಕೆ ನೇತೃತ್ವ ನೀಡುವ ರಾಮಜನ್ಮಭೂಮಿ ತೀರ್ಥ್ ಕ್ಷೇತ್ರ ಟ್ರಸ್ಟ್ ಗೆ 21,000 ರೂಪಾಯಿ ದೇಣಿಗೆಯನ್ನು ಗುಜರಾತ್ ಕಾಂಗ್ರೆಸ್‍ನ ಕಾರ್ಯಕಾರಿ ಅಧ್ಯಕ್ಷ ಹಾರ್ದಿಕ್ ಪಟೇಲ್ ನೀಡಿದ್ದಾರೆ. ತನಗೂ ಕುಟುಂಬಕ್ಕೂ ರಾಮನೊಂದಿಗೆ ಭಕ್ತಿಯಿದೆ, ರಾಮಮಂದರ ನಿರ್ಮಾಣಕ್ಕೆ 21000 ರೂಪಾಯಿ ಕೊಡುವೆ ಎಂದು ಪ್ರತಿಜ್ಞೆ ಮಾಡಿದ್ದೆ ಎಂದು ಅವರು ಟ್ರಸ್ಟ್ ಗೆ ನೀಡಿದ ಪತ್ರದಲ್ಲಿ ತಿಳಿಸಿದ್ದಾರೆ. ಈ ಮೊತ್ತವನ್ನು ಟ್ರಸ್ಟ್ ಬ್ಯಾಂಕ್ ಖಾತೆಗೆ ಆಗಸ್ಟ್ ಐದಕ್ಕೆ ಹಾಕಿದ್ದೇನೆ ಎಂದು ಹಾರ್ದಿಕ್ ಪಟೇಲ್ ಹೇಳಿದರು.

ಬುಧವಾರ ನಡೆದ ಭೂಮಿ ಪೂಜೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಂತಾದವರು ಭಾಗವಹಿಸಿದ್ದರು.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.