ಪೆಟ್ರೋಲ್ ಮುಗಿದು ದಾರಿ ಮಧ್ಯೆ ನಿಂತ ಕಾರಿನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

0
496

ಸನ್ಮಾರ್ಗ ವಾರ್ತೆ

ಕೇರಳ, ಆ. 6: ಮಧ್ಯ ರಾತ್ರೆಯಲ್ಲಿ ಆಸ್ಪತ್ರೆಗೆ ಕರೆದು ಕೊಂಡು ಹೋಗುವ ವೇಳೆ ಪೆಟ್ರೋಲ್ ಮುಗಿದು ಹೋಗಿ ಅರ್ಧ ದಾರಿಯಲ್ಲೆ ಕಾರು ನಿಂತು ಅದರಲ್ಲಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ. ದಿಕ್ಕೆಟ್ಟು ನಿಂತಿದ್ದ ಮನೆಯವರಿಗೆ ಪಟ್ರೋಲಿಂಗ್ ನಡೆಸುತ್ತಿದ್ದ ಪೊಲೀಸರು ನೆರವಾಗಿದ್ದಾರೆ. ನಿರ್ಜನ ಸ್ಥಳದಲ್ಲಿ ಕಾರಿನ ಪೆಟ್ರೋಲ್ ಖಾಲಿಯಾಗಿ ನಿಂತುಹೋಗಿತ್ತು.

ಸಮೀಪದಲ್ಲಿ ಪೆಟ್ರೋಲ್ ಬಂಕ್ ಇದ್ದರೂ ಅಲ್ಲಿ ಕೆಲಸಗಾರರಿರಲಿಲ್ಲ. ಈ ನಡುವೆ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಹೊಕ್ಕಳ ಬಳ್ಳಿ ಬೇರ್ಪಡದೆ ತಾಯಿ ಮಗು ಸೀಟಿನಡಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ಇದೇ ವೇಳೆ ಮಂಗಳಾಪುರಂ ಪೊಲೀಸ್ ಠಾಣೆಯ ಪಟ್ರೋಲಿಂಗ್ ಜೀಪು ಅಲ್ಲಿಗೆ ಬಂದಾಗ ಕಾರು ಗಮನಕ್ಕೆ ಬಂದಿತ್ತು.

ಕೂಡಲೇ ಎಸ್‍ಐ ಗೋಪಕುಮಾರ್ ಮತ್ತು ಸಿವಿಲ್ ಪೊಲೀಸಧಿಕಾರಿ ಬಿಜು ಆಂಬುಲೆನ್ಸ್ ಗೆ ಫೋನ್ ಮಾಡಿ ಕರೆಸಿಕೊಂಡರು. ನೆರವಿಗೆ ದಾದಿಯನ್ನೂ ಬರ ಹೇಳಿದರು.

ಇದೇ ದಾರಿಯಲ್ಲಿ ಐಜಿ ಶ್ರೀಜಿತ್ ಕೂಡ ಬಂದರು. ಕೂಡಲೇ ಸೂಕ್ತ ಸಹಾಯ ನೀಡುತ್ತೇವೆ ಎಂದು ಹೇಳಿದರು. ನಂತರ ಹೊಕ್ಕುಳ ಬಳ್ಳಿ ಬೇರ್ಪಡಿಸಿದ ಬಳಿಕ ಮಗುವನ್ನು ಆಂಬುಲೆನ್ಸ್ ನಲ್ಲಿ ಮತ್ತು ಮಹಿಳೆಯನ್ನು ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.