ನಿಷೇಧಾಜ್ಞೆ ಉಲ್ಲಂಘಿಸಿ ವಿಜಯೋತ್ಸವ; ಸಂಘಪರಿವಾರದ ಮೇಲೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸುವಂತೆ ಎಸ್‌ಡಿಪಿಐ ಆಗ್ರಹ

0
777

ಸನ್ಮಾರ್ಗ ವಾರ್ತೆ

ಮಂಗಳೂರು,ಆ.6:ಅಯೋಧ್ಯೆಯ ಬಾಬರಿ ಮಸೀದಿ ಭೂಮಿಯಲ್ಲಿ ಸಾಂವಿಧಾನಿಕ ಮೌಲ್ಯಗಳ ಮೇಲೆ ದಾಳಿ ನಡೆಸಿ ರಾಮಮಂದಿರಕ್ಕೆ ನಿನ್ನೆಯ ದಿವಸ ಶಿಲಾನ್ಯಾಸ ನಡೆಸಿದ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮವಾಗಿ ಪೋಲಿಸ್ ಇಲಾಖೆ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಿತ್ತು, ಅಲ್ಲದೇ ಎಲ್ಲ ರೀತಿಯಲ್ಲಿ ಜಿಲ್ಲಾದ್ಯಂತ ಕಟ್ಟುನಿಟ್ಟಿನ ಕ್ರಮ ಜರುಗಿಸಿತ್ತು.

ಆದರೆ, ಇದನ್ನೆಲ್ಲಾ ನಿರ್ಲಕ್ಷ್ಯಿಸಿ ಕಾನೂನನ್ನು ಕೈಗೆತ್ತಿಕೊಂಡಂತಹ ಸಂಘಪರಿವಾರ ಜಿಲ್ಲೆಯ ಹಲವು ಕಡೆಗಳಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿ ಪೋಲಿಸ್ ಇಲಾಖೆಗೆ ಮತ್ತು ಕಾನೂನಿಗೆ ಬೆಲೆ ನೀಡದೇ ವರ್ತಿಸಿರುವುದು ಕಾಣಲು ಸಾಧ್ಯವಾಗಿದೆ. ಇದನ್ನು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ತೀವ್ರವಾಗಿ ಖಂಡಿಸುತ್ತದೆ.

ಶಿಲಾನ್ಯಾಸಕ್ಕೆ ಮತ್ತು ಕೇಂದ್ರ ಸರಕಾರದ ಜನ ವಿರೋಧಿ ಧೋರಣೆಯ ವಿರುದ್ಧ ವಿರೋಧ ವ್ಯಕ್ತಪಡಿಸುವ ಪಕ್ಷ ಸಂಘಟನೆಗಳಿಗೆ ಪ್ರತಿಭಟನೆ ನಡೆಸಲು ಸಂವಿಧಾನ ಬದ್ಧವಾಗಿ ಅವಕಾಶ ಇದ್ದರೂ ಪ್ರತಿಭಟನೆಗೆ ಅವಕಾಶ ಮಾಡಿಕೊಡದೇ ವಿಜಯೋತ್ಸವ ಆಚರಿಸಲು ಮೌನ ಸಮ್ಮತಿ ನೀಡಿದ ಪೋಲಿಸ್ ಇಲಾಖೆ ದ್ವಿಮುಖ ಧೋರಣೆ ಖಂಡನಾರ್ಹ.

ಆದ್ದರಿಂದ ಕಾನೂನು ಬಾಹಿರವಾಗಿ ವಿಜಯೋತ್ಸವ ಆಚರಿಸಿದ ಸಂಘಪರಿವಾರದ ಗೂಂಡಾಗಳ ಮೇಲೆ ಪೋಲಿಸ್ ಇಲಾಖೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬೇಕು ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಜಿಲ್ಲಾದ್ಯಕ್ಷ ಅಥಾವುಲ್ಲಾ ಜೋಕಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.