ಸನ್ಮಾರ್ಗ ವಾರ್ತೆ
ಚೆನ್ನೈ, ಆ. 6: ಖ್ಯಾತ ನಟಿ ರಾಜಕಾರಣಿ ಖುಶ್‍ಬುಗೆ ಅತ್ಯಾಚಾರ ಬೆದರಿಕೆ ಬಂದಿದೆ. ಸ್ವಯಂ ಖುಶ್‍ಬುರೇ ಈ ವಿಷಯವನ್ನು ಟ್ವೀಟ್ ಮಾಡಿ ತಿಳಿಸಿದ್ದಾರೆ. ಬೆದರಿಕೆ ಹಾಕಿದ ವ್ಯಕ್ತಿಯ ಹೆಸರು ಮತ್ತು ಫೋನ್ ನಂಬರನ್ನು ಖುಶ್‍ಬು ಹೇಳಿದ್ದಾರೆ. ಮುಸ್ಲಿಂ ಆಗಿರುವುದರಿಂದ ತಾನು ಅತ್ಯಾಚಾರಕ್ಕೊಳಗಾಗಬೇಕಾದ ವ್ಯಕ್ತಿಯೆಂದು ಫೋನ್ ಕರೆಮಾಡಿದಾತ ಬೆದರಿಕೆಯೊಡ್ಡಿದ್ದಾನೆ ಎಂದು ಖುಶ್‍ಬು ತಿಳಿಸಿದ್ದಾರೆ.
ಕೊಲ್ಕತ್ತದ ಒಂದು ನಂಬರಿನಿಂದ ತನಗೆ ಫೋನ್ ಕಾಲ್ ಬಂದಿದೆ, ಆತನ ಹೆಸರು ಸಂಜಯ್ ಶರ್ಮ ಎಂದು ಟ್ರೂ ಕಾಲರ್‍ನಲ್ಲಿ ತೋರಿಸಿತೆಂದು ಖುಶ್‍ಬು ತಿಳಿಸಿದರು. ಇದು ರಾಮ ಜನ್ಮಭೂಮಿಯಾಗಿದೆಯೇ ಎಂದು ಪ್ರಧಾನ ಮಂತ್ರಿ ಈ ವಿಷಯವನ್ನು ಸ್ಪಷ್ಟಪಡಿಸಬೇಕೆಂದು ಖುಶ್‍ಬು ಹೇಳಿದರು. ಕೊಲ್ಕತಾದ ಪೊಲೀಸರಿಗೂ ಟ್ಯಾಗ್ ಮಾಡಿ ಖುಶ್‍ಬು ಟ್ವೀಟ್ ಮಾಡಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕೆಂದು ಖುಶ್‍ಬು ಆಗ್ರಹಿಸಿದ್ದಾರೆ.
ತನಗೆ ಹೀಗಾದರೆ ಇತರ ಮಹಿಳೆಯರ ಸ್ಥಿತಿ ಹೇಗಿರಬಹುದು ಎಂದು ಖುಶ್‍ಬು ಪ್ರಶ್ನಿಸಿದ್ದಾರೆ. ಮಹಾರಾಷ್ಟ್ರದ ಮುಸ್ಲಿಂ ಕುಟುಂಬಂದಲ್ಲಿ ಖುಶ್‍ಬು ಜನಿಸಿದ್ದರು. ತಮಿಳ್ ನಟ ನಿರ್ದೇಶಕ ಸುಂದರ್ ಸಿ. ಅವರ ಪತಿ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












