ಸಚಿನ್ ಪೈಲಟ್‍ರನ್ನು ಬೆಂಬಲಿಸುವ ದೊಡ್ಡ ತಂಡ ಕಾಂಗ್ರೆಸ್‌ನಲ್ಲಿದೆ: ಗೆಹ್ಲೋಟ್ ಪರ ಶಾಸಕ

0
396

ಸನಾರ್ಗ ವಾರ್ತೆ

ಜೈಸಲ್ಮೇರ್,ಆ.7: ಸಚಿನ್ ಪೈಲಟ್‍ರನ್ನು ಬೆಂಬಲಿಸುವವರು ಅವರು ತಿಳಿದಿದುಕೊಂಡದ್ದಕ್ಕಿಂತ ಹೆಚ್ಚು ಮಂದಿ ಕಾಂಗ್ರೆಸ್‍ನಲ್ಲಿದ್ದಾರೆ ಎಂದು ಅಶೋಕ್ ಗೆಹ್ಲೋಟ್ ಪರ ಶಾಸಕ ಪ್ರಶಾಂತ್ ಬೈರ ಹೇಳಿದ್ದಾರೆ. ಅನಾರೋಗ್ಯ ನಿಮಿತ್ತ ಹೊಟೇಲಿನಿಂದ ಹೊರ ಬಂದಿದ್ದ ಬೈರ ಒಂದು ಖಾಸಗಿ ವಾಹಿನಿಗೆ ಈ ರೀತಿ ಪ್ರತಿಕ್ರಿಯೆ ನೀಡಿದರು.

ಸಚಿನ್ ಜೊತೆಗೆ ದೊಡ್ಡ ತಂಡವಿದೆ. ಅದು ಅವರಿಗೆ ಗೊತ್ತಿಲ್ಲ. ನಮ್ಮಂತವರ ಸಲಹೆಯನ್ನು ಸ್ವೀಕರಿಸಲು ಅವರು ಸಿದ್ಧರಿಲ್ಲ ಅವರಿಗೆ ಹತ್ತೊಂಬತ್ತು ಮಂದಿಯಲ್ಲ 40-45 ಶಾಸಕರ ಬೆಂಬಲವಿದೆ. ಆದರೆ ಅವರು ನಾವು ಹೇಳುವುದನ್ನು ಗಮನಿಸುವುದಿಲ್ಲ. ನನಗೆ ಬೇರೆ ಯಾರೋ ಇದರ ನಡುವೆ ಆಟವಾಡುತ್ತಿದ್ದಾರೆ ಎಂದು ನನಗೆ ಅನಿಸಿದೆ ಎಂದು ಬೈರ ಹೇಳಿದರು.

40-45 ಶಾಸಕರ ಬೆಂಬಲ ಸಚಿನ್‍ರಿಗೆ ಇದೆ ಅಂದರೆ ಅವಿಶ್ವಾಸ ಗೊತ್ತುವಳಿ ಸಮಯದಲ್ಲಿ ಕಾಂಗ್ರೆಸ್ ವಿರುದ್ಧ ಮತ ಚಲಾಯಿಸುತ್ತೇವೆ ಎಂದು ಅರ್ಥವಲ್ಲ. ರಾಜ್ಯದ ರಾಜಕೀಯ ಬಿಕ್ಕಟ್ಟಿನಲ್ಲಿ ಬಿಜೆಪಿಗೆ ಮುಖ್ಯ ಪಾತ್ರವಿದೆ ಎಂದು ಬೈರ ಆರೋಪಿಸಿದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.