ಸನ್ಮಾರ್ಗ ವಾರ್ತೆ
ರಾಯ್‍ಪುರ,ಆ.7: ಕೊರೋನ ಪೀಡಿತಳಾಗಿ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬಂದಿದ್ದ ಒಂಬತ್ತು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆಸ್ಪತ್ರೆಯ ಸಿಬ್ಬಂದಿಯನ್ನು ಬಂಧಿಸಲಾಗಿದೆ. ಖಾಸಗಿ ಆಸ್ಪತ್ರೆಯ 44 ವರ್ಷ ವಯಸ್ಸಿನ ಸಿಬ್ಬಂದಿಯನ್ನು ಬಂಧಿಸಲಾಗಿದ್ದು, ಘಟನೆ ಛತ್ತೀಸ್ಗಡದ ರಾಯ್‍ಪುರದಲ್ಲಿ ನಡೆದಿದೆ.
ಲೈಂಗಿಕ ಕಿರುಕುಳಕ್ಕೆ ಒಳಗಾದ ಬಾಲಕಿ ತಂದೆ-ತಾಯಿಗಳಿಗೆ ತಿಳಿಸಿದ್ದಾಳೆ. ವಿವರ ತಿಳಿದೊಡನೆ ಪೊಲೀಸರು ಕ್ರಮ ಜರಗಿಸಿದ್ದಾರೆ ಎಂದು ರಾಯ್‍ಪುರ ಪೊಲೀಸ್ ಸುಪರಿಡೆಂಟ್ ಹೇಳಿದ್ದಾರೆ. ಆರೋಪಿಯ ವಿರುದ್ಧ ಪೊಕ್ಸೊ ಅನ್ವಯ ಪ್ರಕರಣ ದಾಖಲಿಸಲಾಗಿದೆ.












