Home ಲೇಖನ ಆರ್ ಟಿ ಐ ದುರ್ಬಲಗೊಳಿಸುವ ಹುನ್ನಾರ
ಸ್ವತಂತ್ರ ಭಾರತದ ಅತ್ಯಂತ ಬಲಶಾಲಿ ಹಕ್ಕುಗಳಲ್ಲಿ ಮಾಹಿತಿ ಹಕ್ಕು ಪ್ರಮುಖವಾಗಿದೆ. 2005ರಲ್ಲಿ ಮಾಹಿತಿ ಹಕ್ಕು ಕಾನೂನು (ಆರ್ ಟಿ ಐ) ಅತಿದೊಡ್ಡ ಅಯುಧವಾಗಿ ಪ್ರಜೆಯ ಕೈಗೆ ಸಿಕ್ಕಿತು. ಆದರೆ, ಆರಂಭದಿಂದಲೇ ಅದನ್ನು ಸರಕಾರ ಮತ್ತು ಬ್ಯೂರಾಕ್ರಸಿಯು ದುರ್ಬಲಗೊಳಿಸಲು ಶ್ರಮಿಸುತ್ತಾ ಬಂದಿದೆ. ಆದರೆ ವಿರೋಧ ಇದ್ದುದರಿಂದ ಅದು ಆಗಿಲ್ಲ. ಆದರೆ ಈಗ ಅದನ್ನು ಹೊರಗೆ ಹೇಳದೆ ದುರ್ಬಲಗೊಳಿಸಲು ಮೋದಿ ಸರಕಾರ ಗುಟ್ಟಾಗಿ ಹೊರಟಿದೆ.
ಬಿಜೆಪಿ ಅಧಿಕಾರಕ್ಕೆ ಬಂದುದೇ ಆಡಳಿತ ರಂಗದ ಕಪಟತನ ಮತ್ತು ಭ್ರಷ್ಟಾಚಾರ ನಿರ್ಮೂಲನದ ವಾಗ್ದಾನ ಮಾಡಿಯಾಗಿದೆ. ಆದರೆ ಆರ್ಟಿಐಗೆ ನೀರು ಸೇರಿಸುವ ಮೂಲಕ ಆಡಳಿತ ಪಾರದರ್ಶಕತೆ ಮತ್ತು ಭ್ರಷ್ಟಚಾರ ಇಲ್ಲದಂತೆ ಮಾಡುವ ಅವಕಾಶವನ್ನೇ ಕಳಕೊಳ್ಳುವಂತಾಗಿಸಗಲು ಹೊರಟು ಬಿಜೆಪಿ ಸಾಬೀತುಪಡಿಸಿದ್ದು ತಮ್ಮ ಭ್ರಷ್ಟಾಚಾರ ವಿರೋಧ, ಆಡಳಿತ ಪಾರದರ್ಶಕತೆಯು ಪೊಳ್ಳು ಎಂಬುದನ್ನಾಗಿದೆ. ಈ ಪ್ರಯತ್ನವನ್ನು ಈಗ ವಿರೋಧದ ಕಾರಣ ಮುಂದೂಡಲಾಗಿದೆ. ಆದರೆ ಅದನ್ನು ಕೈ ಬಿಟ್ಟಿಲ್ಲ ಎಂಬುದು ಗೊತ್ತಿರಬೇಕು. ಕಾನೂನು ನಿರ್ಮಾಣದ ಮೊದಲು ಪೂರ್ವಭಾವಿ ಸಮಾಲೋಚನೆ ನಡೆಸಬೇಕೆಂಬ ನಿಯಮ ಗಳನ್ನು ಗಾಳಿಗೆ ತೂರಿ ಆರ್ಟಿಐ ತಿದ್ದುಪಡಿಯನ್ನು ಪಾರ್ಲಿಮೆಂಟು ಅಧಿವೇಶನದ ಕಾರ್ಯಕ್ರಮ ಪಟ್ಟಿಯಲ್ಲಿ ಸೇರಿಸಲಾಗಿದೆ.
ಬಿಜೆಪಿ ಇದಕ್ಕಿಂತ ಮುಂಚೆಯೂ ಆರ್ ಟಿ ಐಯ ಬೆನ್ನುಮೂಳೆ ಮುರಿಯಲು ನೋಡಿತ್ತು. ಕಳೆದ ವರ್ಷ ತಂದ ತಿದ್ದುಪಡಿ, ಅರ್ಜಿಗಳಿಗೆ ಶರ್ತಗಳನ್ನು ಸೃಷ್ಟಿಸಲಾಯಿತು. ಇದು ಅಂದು ಪಾರ್ಲಿಮೆಂಟಿನಲ್ಲಿ ಪಾಸಾಗಿದ್ದರೆ ಆರ್ ಟಿ ಐ ಕಾರ್ಯಕರ್ತರನ್ನು ಬೆದರಿಸಿ ಬಲವಂತ ಪಡಿಸಿ ಮಾಹಿತಿ ಹಕ್ಕು ಅರ್ಜಿಗಳನ್ನು ಹಿಂದಕ್ಕೆ ಪಡೆಯುವಂತೆ ಮಾಡಬಹುದಿತ್ತು. ಸಾರ್ವಜನಿಕ ಹೋರಾಟಗಾರರು ಮತ್ತು ಪ್ರತಿ ಪಕ್ಷಗಳ ಭಾರೀ ವಿರೋಧದಿಂದಾಗಿ ಆ ತಿದ್ದುಪಡಿ ತರಲಾಗಿಲ್ಲ. ಈಗ ಇದೋ ಮಾಹಿತಿ ಹಕ್ಕು ಆಯೋಗದ ಅಧ್ಯಕ್ಷರನ್ನು ನಿಯಂತ್ರಿ ಸಲು ಇನ್ನೊಂದು ಸಂಚಿನೊಂದಿಗೆ ಸರಕಾರ ಬಂದಿದೆ.
ಮಾಹಿತಿ ಹಕ್ಕು ಆಯೋಗದ ಅಧ್ಯಕ್ಷರ ಸೇವೆಯ ಕಾಲಾವಧಿ ಮತ್ತು ಸಂಬಳಕ್ಕೆ ಸಂಬಂಧಿಸಿ ಬದಲಾವಣೆಗೆ ತಿದ್ದುಪಡಿ ತರುವ ಉದ್ದೇಶ ಮೋದಿಯವರದು. ವೇತನ, ಸೌಲಭ್ಯಗಳನ್ನು ಕೇಂದ್ರ ಸರಕಾರದ ತೀರ್ಮಾನಕ್ಕೆ ಅನ್ವಯ ಗೊಳಿಸುವುದು ತಿದ್ದುಪಡಿಯ ಉದ್ದೇಶ. ಈಗಿರುವ ವ್ಯವಸ್ಥೆ ಯಲ್ಲಿ ಕಮಿಶನರರ ಅಧಿಕೃತ ಕಾಲಾವಧಿ, ಸಂಬಳ, ಭತ್ತೆಗೆ ಕಾನೂನಿನ ಸಂರಕ್ಷಣೆ ಕೊಡಲಾಗಿದೆ. ಆದರೆ ಇವೆಲ್ಲವನ್ನೂ ಕೇಂದ್ರ ಸರಕಾರದ ಮರ್ಜಿಗೆ ಬಿಟ್ಟುಕೊಡುವುದೆಂದರೆ ಅದು ಮಾಹಿತಿ ಹಕ್ಕಿನ ಅಂತ್ಯವಾಗಿರುತ್ತದೆ. ಮಾಹಿತಿ ಹಕ್ಕು ಆಯುಕ್ತ ಮತ್ತು ಚುನಾವಣಾ ಆಯುಕ್ತರ ಸಾಂವಿಧಾನಿಕ ಪದವಿಗಳಲ್ಲಿ ಪರಸ್ಪರ ವ್ಯತ್ಯಾಸ ಇದೆ ಎಂದು ವ್ಯಾಖ್ಯಾನವನ್ನು ಹೊರಡಿಸಲಾಗಿದೆ. ಇಂತಹ ವಾದಗಳ ಬಾಲಿಶತನವನ್ನು ಕಾನೂನು ತಜ್ಞರು ಬೆಟ್ಟುಮಾಡಿದ್ದಾರೆ. ಮಾತ್ರವಲ್ಲ ಮಾಹಿತಿ ಹಕ್ಕು ಸಂವಿಧಾನದ ಮೂಲಭೂತ ಹಕ್ಕಿನ ಭಾಗವಾಗಿದೆ ಎಂದು ಬೆಟ್ಟು ಮಾಡಿ ತೋರಿಸಲಾಗಿದೆ.
ಸಂವಿಧಾನದ 19(1) (ಎ) ವ್ಯಾಪ್ತಿಗೊಳಪಡುವ ಮಾಹಿತಿಹಕ್ಕು ಅದಲ್ಲದೆ, ಭಾರತ ಸಹಿಹಾಕಿದ ಸಾರ್ವಲೌಕಿಕ ಮಾನವಹಕ್ಕು ಘೋಷಣೆಯ ಪ್ರಕಾರ ಅಭಿಪ್ರಾಯ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಯಾವುದೇ ವಿಚಾರದಲ್ಲಿ ಆರ್ಟಿಐ ಕಾನೂನಡಿಯಲ್ಲಿ ಸಲ್ಲಿಸುವ ಅರ್ಜಿಗೆ ಮಾಹಿತಿ ನೀಡಿರುವ ಕುರಿತು 2005ರಲ್ಲಿ ಚರ್ಚಿಸಿ ಪಾರ್ಲಿ ಮೆಂಟು ಪಾಸು ಮಾಡಿತ್ತು. ಇಂಥ ಆರ್ಟಿಐಗೆ ಕೇಂದ್ರ ಸರಕಾರ ತಿದ್ದುಪಡಿ ನಡೆಸಲು ಮುಂದಾಗಿದೆ. ಈ ಯತ್ನದ ಮೂಲಕ ಬಿಜೆಪಿ ಭ್ರಷ್ಟಾಚಾರ, ಆಡಳಿತ ಪಾರದರ್ಶಕತೆ ತಮ್ಮ ಉದ್ದೇಶವೇ ಅಲ್ಲ ಎಂದು ಸಾಬೀತುಪಡಿಸುತ್ತಿದೆ. ಆರ್ ಟಿ ಐಯ ಮೂಲಕ ದೊಡ್ಡ ಹಗರಣಗಳನ್ನು ಬಟಾಬಯಲುಗೊಳಿಸಲು ಮತ್ತು ಆಡಳಿತ ರಂಗದಲ್ಲಿನ ಭ್ರಷ್ಟಾಚಾರವನ್ನು ಸ್ವಲ್ಪವಾದರೂ ಹೊರಗೆಡವಲು ಸಾಧ್ಯವಾಗಿದೆ ಈವರೆಗೆ. ಅದಕ್ಕೆ ಈಗ ಕೊಡಲಿ ಹಾಕುತ್ತಿದೆ ಮೋದಿ ಸರಕಾರ.
ಈತನ್ಮಧ್ಯೆ ಬಿಜೆಪಿಯ ಆಡಳಿತದಲ್ಲಿ ಸಾರ್ವ ಜನಿಕರಿಗೆ ಆಡಳಿತದ ವಿವರಗಳು ಒದಗಿಸದಂತೆ ಹಲವು ರೀತಿಯಲ್ಲಿ ನೋಡಿಕೊಳ್ಳಲಾಗುತ್ತಿದೆ. ನೋಟು ನಿಷೇಧದ ಎಲ್ಲ ಮಜಲುಗಳನ್ನೂ ಅಡಗಿಸಿಡಲಾಗಿದೆ. ಲೋಕಪಾಲ ಮಸೂದೆ, ವಿಸಲ್ ಬ್ಲೇವರ್ ಸಂರಕ್ಷಣಾ ಕಾನೂನು ದೂರು ಪರಿಹಾರ ಕಾನೂನು ಇವೆಲ್ಲವನ್ನು ವಿಳಂಬಿಸ ಲಾಗುತ್ತಿದೆ. ಇಷ್ಟು ಸಾಲದೆಂಬಂತೆ ಆರ್ ಟಿ ಐಗೆ ತಿದ್ದುಪಡಿ ಮಾಡದಿದ್ದರೂ ಹೀಗೆ ಮಾಡಲು ಮೋದಿ ಸರಕಾರದಿಂದ ಸಾಧ್ಯವಾಗಿದೆ. ಆರ್ ಟಿ ಐ ತಿದ್ದುಪಡಿ ಆದರೆ ಜನರ ಅರಿಯುವ ಹಕ್ಕು ಕಸಿದುಕೊಂಡಂತೆ. ಜನರ ಅರಿವ ಹಕ್ಕು ಅಥವಾ ಮಾಹಿತಿ ಹಕ್ಕು ರಕ್ಷಿಸುವ ಹೊಣೆಗಾರರು ಕೊನೆಯಲ್ಲಿ ಜನರೇ ಆಗಿರುತ್ತಾರೆ.
ಸ್ವಾತಂತ್ರ್ಯಕ್ಕೆ ಕಲ್ಪಿಸುವ ಬೆಲೆ ಅತ್ಯಂತ ಜಾಗರೂಕತೆಯಾಗಿದೆ. ಇದು ಆರ್ ಟಿ ಐ ತಿದ್ದುಪಡಿ ವಿಚಾರದಲ್ಲಿ ಸಂಗತ ವಿಚಾರವಾಗಿದೆ. ಆರ್ ಟಿ ಐ ತಿದ್ದುಪಡಿಗೆತ್ನಿಸುತ್ತಿರುವ ಸರಕಾರದ ವಿರುದ್ಧ ಒತ್ತಡ ಬರಬೇಕು. ಸಂಸದರು ಸರಕಾರದ ಮುಂದೆ ಈ ವಿಷಯ ಎತ್ತಿ ತಿದ್ದುಪಡಿ ಯತ್ನ ವಿರೋಧಿಸಬೇಕು. ಮಾತ್ರವಲ್ಲ ಆರ್ ಟಿ ಐಯನ್ನು ದುರ್ಬಲಗೊಳಿಸುವ ಹುನ್ನಾರ ಹೆಚ್ಚು ಪ್ರಯೋಜನ ಪಡಿಸಲು ಜನರು ಮುಂದೆ ಬರಬೇಕು. ಸರಕಾರದ ಕಡೆಯಿಂದ ಅಸಹಕಾರ ಇದ್ದರೂ ಇಲ್ಲದಿದ್ದರೂ ಮಾಹಿತಿಯ ಹಕ್ಕಿನಡಿಯಲ್ಲಿ ಅರ್ಜಿಗಳು ಈಗ ಕಡಿಮೆ ದಾಖಲಿಸಲ್ಪಡುತ್ತಿದೆ. 2015-16ಗೆ ಹೋಲಿಸಿದರೆ ಶೇ. 6ರಷ್ಟು ಕಡಿಮೆ ಅರ್ಜಿಗಳಿ ದ್ದವು. 2016-17ರಲ್ಲಿ. ಆದ್ದರಿಂದ ಹಕ್ಕಿದ್ದರೆ ಸಾಲದು ಅದನ್ನು ಬಳಸುವುದು ಕೂಡಾ ಆಗಬೇಕು. ಕಾರಣ ಮಾಹಿತಿ ಹಕ್ಕು ಮತದಾನ ಹಕ್ಕಿಗಿಂತಲೂ ದೊಡ್ಡದು. ಅದು ನಷ್ಟವಾಗಬಾರದು. ನಾವು ಹಕ್ಕನ್ನು ಬೇಕುಬೇಕೆಂದೇ ಕಳಕೊಳ್ಳಬಾರದು.