ಯುಏಇ: 14 ಮಿಲಿಯನ್ ದಿರ್ಹಮ್ ಕಳ್ಳತನ, ಆರೋಪಿಯ ಬಂಧನ

0
12

ಸನ್ಮಾರ್ಗ ವಾರ್ತೆ

ಯುಏಇ ಪ್ರಮುಖ ಉದ್ಯಮಿಯೊಬ್ಬರ ಸೋಗಿನಲ್ಲಿ 14 ಮಿಲಿಯನ್ ದಿರ್ಹಮ್ ಮೌಲ್ಯದ ಆಭರಣಗಳನ್ನು ಖರೀದಿಸಿ ನಂತರ ಹಣ ನೀಡದೆ ನಾಪತ್ತೆಯಾಗಿದ್ದ ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದೆ. ಈತ ತನ್ನ ಮನೆಯ ಬಳಿ ಅಡಗಿಕೊಂಡಿದ್ದ.

ಆರು ತಿಂಗಳ ಹಿಂದೆ ಈ ವಂಚನೆ ನಡೆದಿತ್ತು. ಹಣ ಸಿಗದ ಕಾರಣ ಆಭರಣ ವ್ಯಾಪಾರಿಯ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದರು. ಇದಾಗಿ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ಮತ್ತು ಚಿನ್ನವನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ.