ಸನ್ಮಾರ್ಗ ವಾರ್ತೆ
2027 ಜನವರಿ ಒಂದರಿಂದ ಯುಎಇಯಲ್ಲಿ ಹೊಸ ಸಂಚಾರ ನಿಯಮ ಜಾರಿಯಾಗಲಿದೆ. ಮುಖ್ಯವಾಗಿ ಮಕ್ಕಳ ಕಾರು ಆಸನಗಳ ನಿಯಮಗಳನ್ನು ಪೋಷಕರು ಜಾಗರೂಕತೆಯಿಂದ ಪರಿಶೀಲಿಸಬೇಕು ಎಂದು ಕೇಳಿಕೊಳ್ಳಲಾಗಿದೆ.
ನಾಲ್ಕು ವರ್ಷ ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕಾರು ಸೀಟುಗಳು ಕಡ್ಡಾಯ. ಆಸನವನ್ನು ವಾಹನದ ಹಿಂಭಾಗದಲ್ಲಿ ಅಳವಡಿಸಬೇಕು. ಮಗುವಿನ ತೂಕ ಮತ್ತು ಎತ್ತರಕ್ಕೆ ಸೂಕ್ತವಾಗಿರಬೇಕು ಮಗುವಿನ ಹಿಂದಿನ ಸೀಟಿನಲ್ಲಿ ಇನ್ನೊಬ್ಬ ವ್ಯಕ್ತಿ ಕೂಡ ಇರಬೇಕು. ವಾಹನದಲ್ಲಿ ಹಿಂಭಾಗದ ಸೀಟುಗಳಿಲ್ಲದಿದ್ದರೆ ಮುಂಭಾಗದಲ್ಲಿ ಮಕ್ಕಳ ಸುರಕ್ಷತಾ ಸೀಟನ್ನು ಅಳವಡಿಸಬಹುದು. ಆದರೆ ಆಸನವು ಹಿಂಭಾಗಕ್ಕೆ ಮುಖ ಮಾಡಿರಬೇಕು.
ಮಕ್ಕಳು ಮುಂಭಾಗದ ಪ್ರಯಾಣಿಕರ ಸೀಟಿನಲ್ಲಿ ಕುಳಿತುಕೊಳ್ಳಬೇಕಾದರೆ ಒಂದೋ ಅವರು ಹತ್ತು ವರ್ಷಕ್ಕಿಂತ ಮೇಲಿನವರಾಗಿರಬೇಕು ಅಥವಾ ಕನಿಷ್ಠ 145 ಸೆಂಟಿ ಮೀಟರ್ ಎತ್ತರ ಇರಬೇಕು. ಒಂಬತ್ತು ವರ್ಷವಾಗಿದ್ದರೂ ಮಗುವಿನ ಎತ್ತರ 145cm ಇದ್ದರೆ ಮುಂಭಾಗದಲ್ಲಿ ಕುಳಿತುಕೊಳ್ಳಬಹುದು.












