ಸನ್ಮಾರ್ಗ ವಾರ್ತೆ
ಇರಾನಿನಲ್ಲಿ ಮಹಿಳೆಯರಿಗಾಗಿ ವಿಶೇಷ ಮಿಲಿಟರಿ ತರಬೇತಿ ಶಿಬಿರವನ್ನು ತೆರೆಯಲಾಗಿದೆ ಎಂದು ವರದಿಯಾಗಿದೆ. ತೆಹರಾನ್ ನ ಆಜಾದಿ ಚೌಕದಲ್ಲಿ ನಡೆದ ತರಬೇತಿಯಲ್ಲಿ ಅನೇಕ ಮಹಿಳೆಯರು ಭಾಗವಹಿಸಿದರು. ಜಾನ್ ಪದಾಯನ್ ಎಂಬ ಅಭಿಯಾನವನ್ನು ಇರಾನ್ ಆರಂಭಿಸಿದ್ದು ದೇಶದ ರಕ್ಷಣೆಯನ್ನು ಬಲಪಡಿಸಲು ಇದನ್ನು ಪ್ರಾರಂಭಿಸಲಾಗಿದೆ.
ಜಾನ್ ಪದಯನ್ ಎಂದರೇ ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಲು ಸಿದ್ದರಿರುವ ಸ್ವಯಂಸೇವಕರು ಎಂದರ್ಥ. ಇರಾನಿನ ಉನ್ನತ ಮಿಲಿಟರಿ ಅಧಿಕಾರಿಗಳು ಪ್ರಾರಂಭಿಸಿದ ಈ ಅಭಿಯಾನವನ್ನು ದೇಶಾದ್ಯಂತ ಹರಡುವ ಗುರಿಯನ್ನು ಹೊಂದಲಾಗಿದೆ. ಮಹಿಳೆಯರಿಗೆ ಬಂದೂಕುಗಳು ಸೇರಿದಂತೆ ಶಸ್ತ್ರಾಸ್ರಗಳನ್ನು ನಿರ್ವಹಿಸುವುದು, ಡ್ರೋನ್ ಗಳನ್ನು ನಿರ್ವಹಿಸುವುದು, ನಗರಗಳಲ್ಲಿ ವಿಶೇಷ ಸಂದರ್ಭಗಳಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದು, ಸ್ವರಕ್ಷಣೆ, ಪ್ರಥಮ ಚಿಕಿತ್ಸೆ, ಹಗ್ಗ ತರಬೇತಿ ಮತ್ತು ಪ್ರಾಯೋಗಿಕವಾಗಿ ಬದುಕುಳಿಯುವ ತರಬೇತಿಯನ್ನು ಇದರಲ್ಲಿ ನೀಡಲಾಗುವುದು ಎಂದು ವರದಿಯಾಗಿದೆ.
ಪ್ರಸ್ತುತ ಇರಾನ್ನಲ್ಲಿ ಮಹಿಳೆಯರು ಕಡ್ಡಾಯ ಮಿಲಿಟರಿ ಸೇವೆಗೆ ಒಳಪಟ್ಟಿಲ್ಲ. ಇರಾನಿನ ಸಂವಿಧಾನದ ಪ್ರಕಾರ ಮಹಿಳೆಯರಿಗೆ ಮೂಲಭೂತ ಮಿಲಿಟರಿ ತರಬೇತಿಯನ್ನು ಒದಗಿಸಲಾಗುತ್ತದೆ.












