ಸನ್ಮಾರ್ಗ ವಾರ್ತೆ
ಬೆಂಗಳೂರು,ಆ.12: ಫೇಸ್‍ಬುಕ್‍ನಲ್ಲಿ ಪ್ರವಾದಿಯವರನ್ನು ನಿಂದಿಸುವ ರೂಪದಲ್ಲಿ ಪೋಸ್ಟ್ ಹಾಕಿದ್ದಕ್ಕಾಗಿ ಬೆಂಗಳೂರಿನಲ್ಲಿ ಜನರು ಬೀದಿಗೀಳಿದರು. ಪೊಲೀಸ್ ಗೋಲಿಬಾರಿನಲ್ಲಿ ಮೂರು ಮಂದಿ ಮೃತಪಟ್ಟಿದ್ದು, ಓರ್ವ ಗಾಯಗೊಂಡಿದ್ದಾಗಿ ಪೊಲೀಸ್ ಕಮಿಷನರ್ ಕಮಲ್ ಪಂತ್ ಹೇಳಿದರು.
ಅಡಿಶನಲ್ ಕಮಿಷನರ್ ಸಹಿತ 60 ಮಂದಿ ಪೊಲೀಸರಿಗೆ ಗಾಯಗಳಾಗಿವೆ. ಕೆ.ಜಿ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕರ್ಫ್ಯೂ ಘೋಷಿಸಲಾಗಿದೆ. ರಾತ್ರಿ ಹತ್ತಕ್ಕೆ ಡಿ.ಜೆ. ಹಳ್ಳಿ, ಕಾವಲಭೈರಸಂದ್ರದಲ್ಲಿ ಅಕ್ರಮ ನಡೆದಿದೆ.
ಪುಲಿಕೇಶಿ ನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಯ ಸಹೋದರಿ ಪುತ್ರ ನವೀನ್ ಫೇಸ್‍ಬುಕ್‍ನಲ್ಲಿ ಪ್ರವಾದಿ ಮುಹಮ್ಮದರನ್ನು ಅವಹೇಳಿಸುವ ರೀತಿಯಲ್ಲಿ ಪೋಸ್ಟ್ ಹಾಕಿದ್ದಾನೆ. ನವೀನ್‍ನನು ಬಂಧಿಸಬೇಕೆಂದು ಆಗ್ರಹಿಸಿ ಬೀದಿಗಿಳಿದ ಜನರು ನವೀನ ಕಾರು ಸಹಿತ ಹಲವು ವಾಹನಗಳು ಸುಟ್ಟುಹಾಕಿದ್ದಾರೆ
ಶಾಸಕರ ಮನೆಯ ಮೇಲೆಯೂ ಕಲ್ಲೆಸೆತವಾಗಿದೆ. ಕಲ್ಲೆಸತದಿಂದ ಮನೆಯ ಕಿಟಕಿ ಗಾಜು ಪುಡಿಯಾಗಿದೆ. ನವೀನ್‍ರನ್ನು ಬಂಧಿಸಿಲು ಆಗ್ರಹಿಸಿ ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿ ಪೊಲೀಸ್ ಠಾಣೆಯ ಮುಂದೆ ಜನರು ನೆರೆದಿದ್ದರು. ಪೊಲೀಸ್ ಠಾಣೆಯ ಮೇಲೆ ಕಲ್ಲೆಸ ನಡೆದಿದೆ. ಉದ್ರೀಕ್ತ ಗುಂಪು ಹಲವಾರು ವಾಹನಗಳನ್ನು ಸುಟ್ಟುಹಾಕಿದ್ದಾಗಿ ವರದಿಯಾಗಿದೆ.
ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












