ಸನ್ಮಾರ್ಗ ವಾರ್ತೆ
ಪ್ಯಾರಿಸ್,ಸೆ.2: ಜಗತ್ತಿನಾದ್ಯಂತ ಪ್ರತಿಭಟನೆಗೆ ಕಾರಣವಾದ ಪ್ರವಾದಿ ಮುಹಮ್ಮದರ(ಸ) ವಿವಾದಿತ ಕಾರ್ಟೂನನ್ನು ಪ್ರೆಂಚ್ ಮ್ಯಾಗಝಿನ್ ಚಾರ್ಲಿ ಹೆಬ್ಡೊ ಪುನಃ ಪ್ರಕಟಿಸಿದೆ.
2015ರಲ್ಲಿ ಭಯೋತ್ಪಾದಕರು ಚಾರ್ಲಿ ಹೆಬ್ಡೊದ ಕಚೇರಿಗೆ ದಾಳಿ ಕಾರ್ಟೂನಿಸ್ಟ್‌ಗಳ ಸಹಿತ 12 ಮಂದಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಬುಧವಾರ ವಿಚಾರಣೆ ಆರಂಭವಾಗಲಿರುವಂತೆ 2006ರಲ್ಲಿ ಪ್ರಕಟಿಸಿದ್ದ ಕಾರ್ಟೂನ್‍ಗಳನ್ನು ಮರುಪ್ರಕಟಿಸಿದೆ.
‘ನಾವು ಎಂದು ಬಿದ್ದು ಹೋಗುವುದಿಲ್ಲ, ನಾವು ಎಂದೂ ಬಿದ್ದು ಹೋಗುವುದಿಲ್ಲ’ ಎಂದು ಸಂಪಾದಕೀಯ ಬರೆದು 12 ಕಾರ್ಟೂನ್‍ಗಳನ್ನು ಮುಖ ಪುಟದಲ್ಲಿ ಪ್ರಕಟಿಸಿದೆ.
2015ರ ದಾಳಿಯ ಬಳಿಕ ಈ ಕಾರ್ಟೂನ್ ಪ್ರಕಟಿಸುವ ಬೇಡಿಕೆ ಬಂದಿತ್ತು. ಸರಿಯಾದ ಸಮಯದಲ್ಲಿ ಸರಿಯಾದ ಕಾರಣಕ್ಕೆ ಕಾಯುತ್ತಿದ್ದೆವು ಎಂದು ಸಂಪಾದಕೀಯ ತಿಳಿಸಿದೆ.
2015 ಜನುವರಿ 7 ರಂದು ಚಾರ್ಲಿ ಹೆಬ್ಡೊ ಕಚೇರಿಗೆ ಸಹೋದರರಾದ ಝೈದ್, ಶರೀಫ್ ಕೌಚಿ ನಡೆಸಿದ ಗುಂಡಿನ ದಾಳಿಯಲ್ಲಿ ಸಂಪಾದಕ ಸ್ಟೀಫನ್ ಚಾರ್‍ಬೊಯನಿರ್, ನಾಲ್ವರು ಕಾರ್ಟೂನಿಸ್ಟ್‌ಗಳು, ಇಬ್ಬರು ಕಾಲಮಿಸ್ಟುಗಳು, ಕರಡು ಸಂಪಾದಕ ಸಹಿತ 12 ಮಂದಿ ಕೊಲೆಗೀಡಾಗಿದ್ದರು.
ಝೈದ್ ಮತ್ತು ಶರೀಫ್‍ರನ್ನು ಪೊಲೀಸರು ಗುಂಡಿಟ್ಟು ಕೊಂದು ಹಾಕಿದ್ದರು. ಎರಡು ದಿವಸದ ಬಳಿಕ ಜನವರಿ ಒಂಬತ್ತಕ್ಕೆ ಸಹೋದರರೊಂದಿಗೆ ಸಂಬಂಧ ಇರಿಸಿಕೊಂಡಿದ್ದ ಅಮೆದಿ ಕೊಲಿಬಾಲಿ ಪಶ್ಚಿಮ ಪ್ಯಾರಿಸಿನ ಯಹೂದಿ ಸೂಪರ್ ಮಾರ್ಕೆಟಿನಲ್ಲಿ ಹಲವು ಮಂದಿಯನ್ನು ಬಂದಿಯಾಗಿಸಿ ನಾಲ್ವರು ಯಹೂದಿಯರನ್ನು ಕೊಲೆ ಮಾಡಿದ್ದ.
ಮಹಿಳಾ ಪೊಲೀಸ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಅಮೆದಿಯನ್ನು ಪೊಲೀಸರು ಹತ್ಯೆ ಮಾಡಿ ಬಂದಿಗಳನ್ನು ಬಿಡುಗಡೆಗೊಳಿಸಿದ್ದರು. ದಾಳಿಗೆ ಹೊಣೆ ಐಎಸ್ ಎಂದು ಅಮೆದಿ ವೀಡಿಯೊ ಸಂದೇಶದಲ್ಲಿ ತಿಳಿಸಿದ್ದನು.
ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












