ಮೋದಿ ನಿರ್ಮಿಸಿದ ದುರುಂತಗಳ ಮೂಲಕ ಭಾರತ ನಿಯಂತ್ರಣ ಕಳೆದುಕೊಂಡು ಓಡುತ್ತಿದೆ- ರಾಹುಲ್ ಗಾಂಧಿ

0
518

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಸೆ. 2: ಮೋದಿ ನಿರ್ಮಿಸಿದ ದುರಂತಗಳ ಮೂಲಕ ಭಾರತ ನಿಯಂತ್ರಣ ಕಳೆದುಕೊಂಡು ಚಲಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ನರೇಂದ್ರ ಮೋದಿ ಸರಕಾರವನ್ನು ಕಟುವಾಗಿ ಟೀಕಿಸಿ ಅವರು ಟ್ವೀಟ್ ಮಾಡಿದ್ದು, ಒಟ್ಟು ಆಂತರಿಕ ಉತ್ಪಾದನೆಯ ದರ ಶೇ.23,9ಕ್ಕೆ ಕುಸಿತವಾಗುವ ಮೂಲಕ ಇತಿಹಾಸ ಅತ್ಯಂತ ದೊಡ್ಡ ಕುಸಿತಕ್ಕೆ ತಲುಪಿತು.

ನಿರುದ್ಯೋಗ ಪ್ರಮಾಣ 45 ವರ್ಷದೊಳಗೆ ಅತ್ಯಂತ ತೀವ್ರವಾಗಿದೆ. ಹನ್ನೆರಡು ಕೋಟಿ ಜನರು ನಿರುದ್ಯೋಗಿಗಳಾಗಿದ್ದಾರೆ. ಜಿಎಸ್ಟಿಯನ್ನು ರಾಜ್ಯ ಸರಕಾರಗಳಿಗೆ ನೀಡದೆ ಕೇಂದ್ರ ಸರಕಾರ ಬಾಕಿಯುಳಿಸಿಕೊಂಡಿದೆ. ಕೊರೋನ ಪ್ರಕರಣದ ಸಾವುಗಳು ಜಾಗತಿಕ ಮಟ್ಟದಲ್ಲಿ ಉನ್ನತ ಸ್ಥಾನದಲ್ಲಿದೆ, ನಮ್ಮ ಗಡಿಗಳೊಳಗೆ ಹೊರಗಿನವರ ನುಸುಳುವಿಕೆ ನಡೆಯುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದರು.

ಭಾರತದ ಅರ್ಥ ವ್ಯವಸ್ಥೆ ತೀವ್ರ ಹಿನ್ನಡೆ ಅನುಭವಿಸುತ್ತಿದೆ. ಮುಂದಿನ ಮೂರನೆ ಹಂತದಲ್ಲಿ ತೀವ್ರ ಕುಸಿತಗೊಳ್ಳಬಹುದು ಎಂದು ಬೆಟ್ಟು ಮಾಡಿರುವ ಎಸ್‌ಬಿಐಯ ವರದಿಯು ಹೊರ ಬಂದ ಬೆನ್ನಿಗೆ ರಾಹುಲ್ ಗಾಂಧಿ ಕೇಂದ್ರ ಸರಕಾರವನ್ನು ತೀವ್ರ ತರಾಟೆಗೆತ್ತಿಕೊಂಡರು. ಲಡಾಕ್ ಗಡಿಯಲ್ಲಿ ಚೀನ ನುಸುಳಲು ಪುನಃ ಶ್ರಮಿಸಿದ ಕುರಿತು ಕೂಡ ರಾಹುಲ್ ಗಾಂಧಿ ಖಾರವಾದ ಪ್ರತಿಕ್ರಿಯೆ ನೀಡಿದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.