Home ಸುದ್ದಿ ಅಲ್ಜಝೀರಾದ ಭದ್ರತಾ ಅನುಮತಿ ಹಿಂಪಡೆದ ಭಾರತ ಸರಕಾರ
ನವದೆಹಲಿ: ಕತಾರ್ ನಲ್ಲಿ ಕೇಂದ್ರ ಸ್ಥಾನವನ್ನು ಹೊಂದಿರುವ ಅಲ್ ಜಝೀರಾಕ್ಕೆ ನೀಡಲಾದ ಭದ್ರತಾ ಅನುಮತಿಯನ್ನು ಭಾರತೀಯ ಗೃಹ ಸಚಿವಾಲಯವು ಹಿಂಪಡೆದುಕೊಂಡಿದೆ ಎಂದು ಇಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಕಾಶ್ಮೀರದ ಪ್ರತ್ಯೇಕತವಾದಕ್ಕೆ ಸಂಬಂಧಿಸಿ ಸಾಕ್ಷ್ಯ ಚಿತ್ರವನ್ನು ಚಾನೆಲ್ ಪ್ರಸಾರ ಮಾಡಿದ್ದು, ಕೇಂದ್ರ ಸರಕಾರವು ಇದನ್ನು ಪಕ್ಷಪಾತ ಮತ್ತು ಪೂರ್ವಾಗ್ರಹ ಪೀಡಿತವಾಗಿರುವುದಾಗಿ ಪರಿಗಣಿಸಿದೆ ಎಂದು ಇಕನಾಮಿಕ್ ಟೈಮ್ಸ್ ಮೂಲ ಗಳು ತಿಳಿಸಿವೆ.
ವಿದೇಶಾಂಗ ಇಲಾಖೆಯು ಈ ವರ್ಷದ ಮೇ ತಿಂಗಳಿನಲ್ಲಿ ಪತ್ರಕರ್ತರು ಜಮ್ಮು ಕಾಶ್ಮೀರ, ಅರುಣಾಚಲ ಪ್ರದೇಶ, ಸಿಕ್ಕಿಂ, ಹಿಮಾಚಲ ಪ್ರದೇಶ ಹಾಗೂ ರಾಜಸ್ಥಾನದ ಕೆಲವು ಪ್ರದೇಶಗಳಿಗೆ ಪ್ರಯಾಣಿಸಲು ಸರಕಾರದಿಂದ ಪೂರ್ವ ಅನುಮತಿ ಪಡೆದಿರಬೇಕೆಂದು ಸಾರಿತ್ತು. ಈ ಪ್ರದೇಶಗಳನ್ನು ಸರಕಾರವು `ಸಂರಕ್ಷಿತ ಹಾಗೂ ನಿರ್ಬಂಧಿತ ಪ್ರದೇಶಗಳು’ ಎಂದು ಪರಿಗಣಿಸುತ್ತದೆ.
ಆದುದರಿಂದ ವಿದೇಶಿ ಚಾನೆಲ್ ಗಳು ಮಾಹಿತಿ ಮತ್ತು ಪ್ರಸಾರಂಗ ಸಚಿವಾಲಯದಿಂದ ಅನುಮತಿ ಪಡೆಯಬೇಕು. ಅಲ್ಜಝೀರಾಕ್ಕೆ 2010ರಲ್ಲಿ ನೀಡಲಾದ ಭದ್ರತಾ ಅನುಮತಿಯನ್ನು 2018ರಲ್ಲಿ ಹಿಂಪಡೆಯಲಾಗಿದೆ. ಸಚಿ ವಾಲಯವು ತನ್ನ ನಿಲುವನ್ನು ಪುನರ್ ಪರಿಶೀಲಿಸುವಂತೆ ಅಲ್ ಜಝೀರಾ ಮನವಿಯನ್ನು ಸಲ್ಲಿಸಿದೆ.
ಈ ಹಿಂದೆ 2018ರಲ್ಲಿ ಅಲ್ ಜಝೀರಾ ಜಮ್ಮು ಮತ್ತು ಕಾಶ್ಮೀರದ ತಪ್ಪಾದ ನಕ್ಷೆಯನ್ನು ಪ್ರಕಟಿಸುವ ಮೂಲಕ ಸಚಿವಾಲಯದಿಂದ 5 ದಿ ನಗಳಿಗೆ ಅಮಾನತುಗೊಂಡಿತ್ತು. ಈ ಸಂದರ್ಭದಲ್ಲಿ ಅಲ್ ಜಝೀರಾ ತನ್ನ ಖಾಲಿ ಪರದೆಯಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಸೂಚಿಸಿದಂತೆ ಈ ಚಾನೆಲ್ ಎಪ್ರಿಲ್ 22ರಂದು 00.01 ಗಂಟೆಗಳಿಂದ ಎಪ್ರಿಲ್ 27, 2015ರ 00:01 ಗಂಟೆಗಳ ವರೆಗೆ ಲಭ್ಯವಿರುವುದಿಲ್ಲ” ಎಂದು ಪ್ರಕಟಿಸಿತ್ತು.
ಇತ್ತೀಚೆಗೆ ಎಬಿಸಿ ನ್ಯೂಸ್, ವಾಯಿಸ್ ಆಫ್ ಇಂಡಿಯಾ, ಫೋಕಸ್ ಎನ್ಇ ಟಿವಿ, ಜಾನ್ಕಾರ್ ನ್ಯೂಸ್, ಮಾ ಟಿವಿ, ಭಕ್ತಿ ಸಾಗರ್, ಎಮ್ ಟ್ಯೂನ್ಸ್ ಮತ್ತು ಲೆಮನ್ ನ್ಯೂಸ್ಗಳ ಭದ್ರತಾ ಅನುಮತಿಯನ್ನು ಸಚಿವಾಲಯ ಹಿಂಪಡೆದಿರುವುದಾಗಿ ಇಕನಾಮಿಕ್ ಟೈಮ್ಸ್ ತಿಳಿಸಿದೆ.
ಇದಲ್ಲದೆ, ಮಾಲಿಕರಿಂದ ರದ್ದತಿಗೆ ಮನವಿ, ಚಾನೆಲ್ಗಳ ಕಾರ್ಯನಿರ್ವಹಣೆ ಸಾಧ್ಯವಾಗದಿರುವಿಕೆ ಮತ್ತು ದಾಖಲಾತಿಗಳನ್ನು ಸಲ್ಲಿಸಲು ವಿಫಲವಾಗಿರುವ ಇತರೆ ಕಾರಣಗಳಿಗಾಗಿಯೂ ಭದ್ರತಾ ಅನುಮತಿಯನ್ನು ಸಚಿವಾಲಯ ಹಿಂಪಡೆಯಬಹುದು.