ಭಾರೀ ಮಳೆಗೆ ಅಸ್ಸಾಮ್‍ ತತ್ತರ: ಹಲವು ಗ್ರಾಮಗಳು ಜಲಾವೃತ

0
993

ಸನ್ಮಾರ್ಗ ವಾರ್ತೆ

ನಗಾಂವ್,ಸೆ.28: ಅಸ್ಸಾಮ್‍ನ ನಾಗಾಂವ್ ಜಿಲ್ಲೆಯ ಹಲವು ಗ್ರಾಮಗಳಲ್ಲಿ ನೆರೆ ಬಂದಿದ್ದು ಸ್ಥಳೀಯ ಜನಜೀವನ ಅಸ್ತವ್ಯಸ್ತವಾಗಿದೆ. ನಿರಂತರ ಮಳೆಯಿಂದಾಗಿ ಬೋರ್‍ಪಾನಿ, ಕಪಿಲಾ ನದಿಗಳ ನೀರಿನ ಮಟ್ಟ ಹೆಚ್ಚಳವಾಗಿದೆ ನೆರೆ ನೀರು ಮನೆಗಳೊಳಗೆ ನುಗ್ಗಿದೆ. ರಾಮಪುರ, ರಾಹಾಗ್ರಾಮದ ಜನರು ಮಾರ್ಗದ ಬದಿಯ ಮನೆಗಳ ಛಾವಣಿಯಲ್ಲಿ ಆಶ್ರಯ ಪಡೆದಿದ್ದಾರೆ. ಸ್ಥಳೀಯರು ಸೆಪ್ಟಂಬರಿನಲ್ಲಿ ಭಾರೀ ಮಳೆ ಸುರಿದಿದ್ದು ನಂತರ ಕಾರ್ಬಿ ಲೆಂಗಪಾಯಿ ಹೈಡ್ರೊ ಇಲೆಕ್ಟ್ರಾನಿಕ್ ಯೋಜನೆಯ ಉದ್ಘಾಟನೆ ನೆರೆ ಹಾವಳಿಗೆ ಕಾರಣವಾಗಿದೆ ಎಂದು ದೂರಿದ್ದಾರೆ.

ಸ್ಥಳೀಯ ನಾಗರಿಕರೊಬ್ಬರು ಅಣೆಕಟ್ಟಿನ ಏಳನೆ ನಂಬರಿನ ದ್ವಾರ ತೆರೆಯಲಾಯಿತು. ಇದರಿಂದ ನೆರೆಯ ಪರಿಸ್ಥಿತಿ ತುಂಬ ಅಪಾಯಕಾರಿ ಸ್ಥಿತಿಗೆ ತಲುಪಿತು. ನಿನ್ನೆ ರಾತ್ರೆ ನೆರೆಯಲ್ಲಿ ಜಾನುವಾರುಗಳು ಕೊಚ್ಚಿ ಹೋಗಿವೆ. ಹೊಲಗಳು ಸಂಪೂರ್ಣ ನಾಶವಾಗಿದೆ. ನಾವು ಮೊದಲಿನಿಂದಲೇ ಕೊರೋನದೊಂದಿಗೆ ಸಂಘರ್ಷ ನಡೆಸುತ್ತಿದ್ದೇವೆ. ಈಗ ನಾವು ಇದರಿಂದ ಹೇಗೆ ದಡ ಮುಟ್ಟಬಹುದು ಎಂದು ಪ್ರಶ್ನಿಸಿದ್ದು, ಸರಕಾರ ತಮಗೆ ನೆರವು ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.