ಬಿಹಾರ ಚುನಾವಣೆ: ಕೇಂದ್ರದಿಂದ 30,000 ಜವಾನರ ಸುರಕ್ಷಾ ಸೇನಾ ನಿಯೋಜನೆ

0
639

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಸೆ.28: ಬಿಹಾರದಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, 30,000 ಮಂದಿಯ ಸುರಕ್ಷಾ ಸೇನೆಯನ್ನು ನಿಯೋಜಿಸಿಲು ಕೇಂದ್ರ ಸರಕಾರ ಸೂಚಿಸಿದೆ. ರಾಜ್ಯದಲ್ಲಿ ಚುನಾವಣೆ ಶಾಂತಿಯುತವಾಗಿ ನಡೆಸಲು ಕೇಂದ್ರ ಸಶಸ್ತ್ರ ಪೊಲೀಸ್(ಸಿಎಪಿಎಫ್) 300 ತುಕಡಿಗಳು, ರೈಲ್ವೆ ಪ್ರೊಟೆಕ್ಷನ್ ಪೋರ್ಸನ್ನು ನಿಯೋಜಿಸಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

ಬೋರ್ಡರ್ ಸೆಕ್ಯೂರಿಟಿ ಪೋರ್ಸ್(ಬಿಎಸ್‍ಎಫ್)80, ಕೇಂದ್ರ ರಿಸರ್ವ್ ಪೊಲೀಸ್ ಪೋರ್ಸ್ 70, ಸಶಸ್ತ್ರ ಗಡಿ ರಕ್ಷಣಾ ದಳ70, ಕೇಂದ್ರ ವಾಣಿಜ್ಯ ಸುರಕ್ಷಾ ಸೇನೆ(ಸಿಐಎಸ್‍ಎಫ್)50, ಇಂಡೋ-ಟಿಬೆಟ್ ಬಾರ್ಡರ್ ಪೊಲೀಸ್(ಐಟಿಬಿಪಿ) 30 ತುಕಡಿಗಳನ್ನು ನೀಡಲಿದೆ. ಒಂದು ತುಕಡಿಯಲ್ಲಿ 100 ಜನರು ಇರುತ್ತಾರೆ. ಒಟ್ಟು 300 ತುಕಡಿಗಳು ಸಿಎಪಿಎಫ್ ಮತ್ತು ಆರ್‍ಪಿಎಫ್‍ಗಳದ್ದಾಗಿದ್ದು 30000 ಸೈನಿಕರನ್ನು ಗಡಿಯಿಂದ ಮತ್ತು ವಿವಿಧ ವಿಭಾಗಗಳಿಂದ ಕರೆಸಿಕೊಂಡು ಬಿಹಾರಕ್ಕೆ ನಿಯೋಜಿಸಲು ಆದೇಶಿಸಲಾಗಿದೆ ಎಂದು ಹಿರಿಯ ಸೇನಾಧಿಕಾರಿ ತಿಳಿಸಿದರು.

ಬಿಹಾರದಲ್ಲಿ ಮೂರು ಹಂತಗಳಲ್ಲಿ ವಿಧಾನಸಭೆಗೆ ಚುನಾವಣೆ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರ ತಿಳಿಸಿದ್ದು, ಪ್ರಥಮ ಹಂತದ ಚುನಾವಣೆ ಅಕ್ಟೋಬರ್ 28ಕ್ಕೆ 71 ವಿಧಾನಸಭಾ ಕ್ಷೇತ್ರಗಳಲ್ಲಿ, ನವೆಂಬರ್ 3ಕ್ಕೆ ಎರಡನೆ ಹಂತದ ಚುನಾವಣೆ 94 ವಿಧಾನಸಭಾ ಕ್ಷೇತ್ರಗಳಲ್ಲಿ ಮತ್ತು ನವೆಂಬರ್ ಏಳಕ್ಕೆ ಮೂರನೆ ಹಂತದ ಚುನಾವಣೆ 78 ಕ್ಷೇತ್ರಗಳಲ್ಲಿ ನಡೆಯಲಿದೆ ಎಂದು ಅವರು ಹೇಳಿದರು. ಮತ ಎಣಿಕೆ ನವೆಂಬರ್ 10ಕ್ಕೆ ನಡೆಯಲಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.