ಶಾಲೆಗಳನ್ನು ತೆರೆಯುವುದು ಕಡ್ಡಾಯವಲ್ಲ: ಕೇಂದ್ರ ಸರಕಾರ ಸ್ಪಷ್ಟನೆ

0
470

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.3: ಅಕ್ಟೋಬರ್ 15ಕ್ಕೆ ಶಾಲೆ ತೆರೆಯುವುದಕ್ಕೆ ಹೊರಡಿಸಲಾದ ಆದೇಶದ ಕುರಿತು ಕೇಂದ್ರ ಗೃಹ ಸಚಿವಾಲಯ ಸ್ಪಷ್ಟನೆ ನೀಡಿದೆ. ಶಾಲೆ ತೆರೆಯುವುದು ಕಡ್ಡಾಯವಲ್ಲ ಎಂದು ಶುಕ್ರವಾರ ಹೊರಡಿಸಿದ ಹೊಸ ಆದೇಶದಲ್ಲಿ ತಿಳಿಸಿದೆ.

ಅಕ್ಟೋಬರ್ 15ರಿಂದ ಶಾಲೆಗಳು ಮತ್ತು ಕೋಚಿಂಗ್ ಸೆಂಟರ್ ತೆರೆಯಲು ಕೇಂದ್ರ ಸರಕಾರ ಅನುಮತಿ ನೀಡಿತ್ತು.

ಅನ್ಲಾಕ್ 5ರ ಭಾಗವಾಗಿ ಶಾಲೆಗಳನ್ನು ತೆರೆಯಲು ಅನುಮತಿಸಲಾಗಿದೆ. ಆದರೆ, ಇದರಲ್ಲಿ ಅಂತಿಮ ತೀರ್ಮಾನವನ್ನು ರಾಜ್ಯ ಸರಕಾರಗಳೇ ಕೈಗೊಳ್ಳಬೇಕೆಂದು ಹೇಳಿತ್ತು. ಶಾಲೆಯ ಆಡಳಿತದೊಂದಿಗೆ ಸಮಾಲೋಚಿಸಿ ಕೊರೋನದ ಸ್ಥಿತಿಯನ್ನು ಅರಿತುಕೊಂಡು ತೀರ್ಮಾನ ಕೈಗೊಳ್ಳಬೇಕೆಂದು ಗೃಹ ಸಚಿವಾಲಯ ಆದೇಶದಲ್ಲಿ ತಿಳಿಸಿದೆ.

ಕೇಂದ್ರ ಸರಕಾರದ ಆದೇಶದ ನಂತರ ಹಲವು ರಾಜ್ಯ ಸರಕಾರಗಳು ಶಾಲೆಗಳನ್ನು ತೆರೆಯಲು ಸಿದ್ಧತೆ ಮಾಡುತ್ತಿವೆ. ಶಾಲೆಗಳು ತೆರೆಯಲಾಗುವುದು ಎಂದು ಉತ್ತರಾಖಂಡ ಸರಕಾರ ಘೋಷಿಸಿದೆ. ಕರ್ನಾಟಕ ಇದಕ್ಕೆ ಸಂಬಂಧಿಸಿದ ಚರ್ಚೆಯನ್ನು ನಡೆಸುತ್ತಿದೆ. ಕೇರಳ ಶೀಘ್ರದಲ್ಲಿ ಶಾಲೆಗಳನ್ನು ತೆರೆಯುವುದಿಲ್ಲ ಎಂಬ ನಿಲುವು ಕೈಗೊಂಡಿದೆ.