ಸಣ್ಣ ಮಕ್ಕಳನ್ನೂ ಅದು ಬಿಟ್ಟಿಲ್ಲ; ಪಬ್ಜಿಗೆ ಇನ್ನೊಂದು ಅವಕಾಶ ಇಲ್ಲ- ಕೇಂದ್ರ ಸರಕಾರ

0
375

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.3: ಪಬ್ಜಿ ಮೊಬೈಲ್ ಗೇಮ್ ಆ್ಯಪ್‌ನ್ನು ಭಾರತ ನಿಷೇಧಿಸಿದೆ. ಇದು ಕೋಟ್ಯಂತರ ಪಬ್ಜಿ ಪ್ರಿಯರನ್ನು ನಿರಾಶಗೊಳಿಸಿದ ಕ್ರಮವಾಗಿದ್ದು. ನಿಷೇಧವನ್ನು ತೆರವುಗೊಳಿಸಲಾಗುವುದು ಗೇಮ್ ಮರಳಿ ಬರಲಿದೆ ಎಂದು ಕೆಲವು ವರದಿಗಳಾಗಿದ್ದವು. ಆದರೆ, ಎಲ್ಲ ನಿರೀಕ್ಷೆಗಳಿಗೆ ಕೇಂದ್ರ ಸರಕಾರ ಉತ್ತರ ನೀಡಿದೆ.

ಪಬ್ಜಿ ನಿಷೇಧ ಶಾಶ್ವತವೆಂದು ಕೇಂದ್ರ ಸರಕಾರದ ಮೂಲಗಳನ್ನು ಉದ್ಧರಿಸಿ ಅಂತಾರಾಷ್ಟ್ರೀಯ ಮಾಧ್ಯಮವಾದ ರಾಯಿಟರ್ಸ್ ವರದಿ ಮಾಡಿದೆ. ಪಬ್ಜಿ ಹಿಂಸಾಸಕ್ತವಾದ ಗೇಮ್ ಆಗಿದೆ. ಆದ್ದರಿಂದ, ಅದಕ್ಕೆ ಭಾರತದಲ್ಲಿ ಅನುಮತಿ ನೀಡಲಾಗದು. ಸಣ್ಣ ಮಕ್ಕಳು ಕೂಡ ಫಬ್ಜಿ ವ್ಯಸನಿಗಳಾಗಿದ್ದಾರೆ. ಯುವಕರ ದಾರಿ ತಪ್ಪಿಸುವ ಪಬ್ಜಿ ಅವರ ಪಾಲಿಗೆ ಭಾರೀ ಅಪಾಯಕಾರಿಯಾಗಿದೆ. ಭಾರತದ ಸೈಬರ್ ಪ್ಲೇಸ್‍ನಲ್ಲಿ ಇಂತಹದೊಂದು ಗೇಮ್‍ಗೆ ಅನುಮತಿ ನೀಡಲು ನಮಗೆ ಸಾಧ್ಯವಿಲ್ಲ ಎಂದು ಸರಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ಚೀನದ ಕಂಪೆನಿ ಟೆನ್ಸ್‌ನ ಗೇಮ್ಸ್‌ನೊಂದಿಗೆ ಸಹಕರಿಸಿ ಕೊರಿಯನ್ ಗೇಮಿಂಗ್ ಕಂಪೆನಿ ಪಬ್ಲಿ ಕಾರ್ಪೊರೇಷನ್ ಪಬ್ಜಿ ಮೊಬೈಲ್ ಭಾರತದಲ್ಲಿ ಪ್ರಸ್ತುಪಡಿಸಿತ್ತು. ಚೀನದೊಂದಿಗೆ ಗಡಿ ಸಂಘರ್ಷದ ಬಳಿಕ ಚೀನದ ನೂರಕ್ಕೂ ಹೆಚ್ಚು ಆಪ್‍ಗಳನ್ನು ಕೇಂದ್ರ ಸರಕಾರ ನಿಷೇಧಿಸಿತ್ತು. ಟಿಕ್‍ಟಾಕ್, ಪಬ್ಜಿ ಕೂಡ ನಿಷೇಧಗೊಂಡಿವೆ. ನಿಷೇಧದ ಬಳಿಕ ಹೇಗಾದರೂ ಮಾಡಿ ಭಾರತಕ್ಕೆ ಮರಳಲು ಪ್ರಯತ್ನಿಸಿದ ಪಬ್ಲಿ ಟೆನ್ಸ್‌ನೊಂದಿನ ಸಂಬಂಧವನ್ನು ಕಡಿದುಕೊಂಡು ಭಾರತದ ಕಂಪೆನಿಯೊಂದಿಗೆ ಚರ್ಚಿಸಿತ್ತು. ಆದರೆ ಕೇಂದ್ರ ಸರಕಾರ ಪಬ್ಜಿಯ ವಿರುದ್ಧ ಇರುವುದರಿಂದ ಅದರ ಪ್ರಯತ್ನ ವಿಫಲವಾಗಲಿದೆ.