ಕಾಶಿ, ಮಥುರಾ ಬಾಕಿ ಹೈ| ಮಥುರಾ ಈದ್ಗಾ ಮಸೀದಿ ತೆರವಿಗೆ ಆಗ್ರಹಿಸಿ ಜಿಲ್ಲಾ ಕೋರ್ಟಿನಲ್ಲಿ ಮೇಲ್ಮನವಿ

0
685

ಸನ್ಮಾರ್ಗ ವಾರ್ತೆ

ಲಕ್ನೊ,ಅ.12: ಮಥುರಾದ ಶ್ರೀಕೃಷ್ಣ ಜನ್ಮಕ್ಷೇತ್ರ ಸಮೀಪದ ಶಾಹಿ ಈದ್ಗಾ ಮಸೀದಿಯನ್ನು ಕೆಡುಹಬೇಕೆಂದು ಆಗ್ರಹಿಸಿ ಶ್ರೀಕೃಷ್ಣ ವಿರಾಜ್‍ಮಾನ್ ಜಿಲ್ಲಾಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿದೆ. ಈ ಹಿಂದೆ ಸಿವಿಲ್ ಕೋರ್ಟು ಈ ಬೇಡಿಕೆಯನ್ನು ತಳ್ಳಿಹಾಕಿತ್ತು. ಇದರ ವಿರುದ್ಧ ಶ್ರೀಕೃಷ್ಣ ವಿರಾಜ್‍ಮಾನ್ ಜಿಲ್ಲಾಕೋರ್ಟಿನ ಮೆಟ್ಟಿಲೇರಿದೆ.

ಶ್ರೀಕೃಷ್ಣನ ಜನ್ಮಸ್ಥಳವನ್ನು ಅತಿಕ್ರಮಿಸಿ ಈದ್ಗಾ ಮಸೀದಿ ಕಟ್ಟಿಸಿದೆಂದು ಆರೋಪಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸೆಪ್ಟಂಬರ್ 30ಕ್ಕೆ ಸಿವಿಲ್ ನ್ಯಾಯಾಲಯ ತಳ್ಳಿಹಾಕಿತ್ತು. ಶಾಹಿ ಈದ್ಗಾಹ್ ಇರುವಲ್ಲಿ ಶ್ರೀಕೃಷ್ಣನ ಜನ್ಮಸ್ಥಳವಿದೆ ಎಂದು ಸಿವಿಲ್ ಕೋರ್ಟಿನಲ್ಲಿ ವಾದಿಸಲಾಗಿತ್ತು. ಉತ್ಖನನದ ಮೂಲಕ ಸತ್ಯಸ್ಥಿತಿ ಬಹಿರಂಗವಾಗಬಹುದು. 13.37 ಎಕರೆ ಜಮೀನು ಶ್ರೀಕೃಷ್ಣ ಜನ್ಮಭೂಮಿಯಿಂದ ಒತ್ತುವರಿ ಮಾಡಲಾಗಿದ್ದು ಅದನ್ನು ತೆರವುಗೊಳಿಸಿ ಕೊಡಬೇಕೆಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಅಯೋಧ್ಯೆಯ ರಾಮ ಮಂದಿರದ ನಂತರ ಮುಂದಿನ ಗುರಿ ಕಾಶಿ, ಮಥುರಾ ಎಂದು ಸಂಘಪರಿವಾರ ನಾಯಕರು ಹಲವು ಭಾರಿ ಹೇಳಿದ್ದರು. ಯೇ ಸಿಫ್ ಝಂಕಿ ಹೇ, ಕಾಶಿ, ಮಥುರಾ ಬಾಕಿ ಹೇ(ಇದು ಆರಂಭ ಮಾತ್ರ. ಕಾಶಿ ಮಥುರಾ ಬಾಕಿಯಿದೆ) ಎಂದು ಘೋಷಣೆ ಹಾಕುತ್ತಿದ್ದರು.

ಕಾಶಿಯ ಪ್ರಸಿದ್ಧ ವಿಶ್ವನಾಥ ಮಂದಿರದ ಗಡಿ ಗ್ಯಾನ್‍ವ್ಯಾಪಿ ಮಸೀದಿಯೊಂದಿಗೆ ಹಂಚಿಕೊಂಡಿದೆ. ಇದನ್ನೂ ಮಥುರಾದ ಶಾಹಿ ಈದ್ಗಾಹ್ ಮಸೀದಿಯನ್ನೂ ಕೆಡುಹಬೇಕೆನ್ನುವುದು ಸಂಘಪರಿವಾರ ಸಂಘಟನೆಗಳು ಬಹುಕಾಲದ ಬೇಡಿಕೆಯಾಗಿದೆ.