ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಅ. 27: ಈ ಬಾರಿ ರೈತರಿಗೂ ಉದ್ಯೋಗಕ್ಕೂ ಮತ ನೀಡಬೇಕೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಹಾರದ ಜನರನ್ನು ವಿನಂತಿಸಿದ್ದಾರೆ. ಬಿಹಾರದ ಮೂರು ಹಂತದ ಚುನಾವಣೆಯಲ್ಲಿ ಮೊದಲ ಹಂತದ ಮತದಾನ ಆರಂಭವಾಗಿದೆ. ಈ ಬಾರಿ ನ್ಯಾಯ, ಉದ್ಯೋಗ, ರೈತರನ್ನು ಮುಂದಿಟ್ಟುಕೊಂಡು ಮತದಾನ ಮಾಡಿ. ಮಹಾಗಟ್ಬಂಧನ್ಗೆ ಮತಹಾಕಿ ಎಂದು ಮೊದಲ ಹಂತದ ಮತದಾರರನ್ನು ಉದ್ದೇಶಿಸಿ ರಾಹುಲ್ ಟ್ವೀಟ್ ಮಾಡಿದ್ದಾರೆ.
16 ಜಿಲ್ಲೆಗಳ 71 ಕ್ಷೇತ್ರಗಳಲ್ಲಿ ಮೊದಲ ಹಂತದ ಚುನಾವಣೆ ನಡೆಯುತ್ತಿದೆ. 1066 ಅಭ್ಯಥಿಗಳು ಸ್ಪರ್ಧಿಸುತ್ತಿದ್ದಾರೆ. ಇವರಲ್ಲಿ 42 ಆರ್ಜೆಡಿ, 35 ಜೆಡಿಯು, 11 ವಿಕಾಸಶೀಲ ಇನ್ಸಾನ್ ಪಾರ್ಟಿ, 7 ಹಿಂದೂಸ್ಥಾನಿ ಅವಾಮಿ ಮೋರ್ಚದ ಅಭ್ಯರ್ಥಿಗಳು ಸೇರಿದ್ದರೆ. ಸೀಟು ಹಂಚಿಕೆ ಪ್ರಕಾರ 243 ವಿಧಾನಸಭೆಯಲ್ಲಿ ಎನ್ಡಿಎಯಿಂದ ಜೆಡಿಯುವಿನ 115, ಬಿಜೆಪಿಯ 110, ವಿಕಾಸಶೀಲ ಪಾರ್ಟಿಯ 11, ಹಿಂದುಸ್ಥಾನಿ ಅವಾಮಿ ಮೋರ್ಚದ ಏಳು ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಮಹಾಘಟ್ಬಂಧನ್ನಲ್ಲಿ ಆರ್ಜೆಡಿಗೆ 144 ಸೀಟುಗಳು, ಕಾಂಗ್ರೆಸ್ಗೆ 70 ಸೀಟುಗಳು, ಎಡಪಕ್ಷಗಳಿಗೆ 29 ಸೀಟುಗಳ ಸ್ಪರ್ಧೆಯೊಂದಿಗೆ ಚುನಾವಣಾ ಕಣದಲ್ಲಿವೆ. ಸಿಪಿಐಎಂಎಲ್ 19, ಸಿಪಿಐ 6, ಸಿಪಿಎಂ ನಾಲ್ಕು ಸ್ಥಾನಗಳಾಗಿ ಎಡಪಕ್ಷಗಳು ತಮ್ಮೊಳಗೆ ಹಂಚಿಕೊಂಡಿವೆ.
ಓದುಗರೇ, sanmarga ಫೇಸ್ ಬುಕ್ ಪುಟವನ್ನು like ಮಾಡಿ ನಮ್ಮನ್ನು ಬೆಂಬಲಿಸಿ.












