ವ್ಯಕ್ತಿಯಲ್ಲ- ಆಶಯ ಮುಖ್ಯ: ಸಿಂಧಿಯಾಗೆ ಗುರಿಯಿಟ್ಟ ಪೈಲಟ್

0
566

ಸನ್ಮಾರ್ಗ ವಾರ್ತೆ

ಗ್ವಾಲಿಯರ್, ಅ. 27: ಈ ಹೋರಾಟದಲ್ಲಿ ವ್ಯಕ್ತಿಗಳಲ್ಲ ಆಶಯ ಮುಖ್ಯವಾಗಿದೆ ಎಂದು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಮಧ್ಯಪ್ರದೇಶದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರದ ವೇಳೆ ಗ್ವಾಲಿಯರ್‍ ನಲ್ಲಿ ಪತ್ರಕರ್ತರೊಂದಿಗೆ ಮಾತಾಡುತ್ತಾ ಹೇಳಿದರು. ಪಾರ್ಟಿಯಲ್ಲಿದ್ದಾಗ ಜ್ಯೋತಿರಾದಿತ್ಯ ಸಿಂಧ್ಯ ತನ್ನ ನಿಕಟ ಮಿತ್ರನಾಗಿದ್ದರು ಎಂದು ಸಿಂಧ್ಯ ಬಿಜೆಪಿಗೆ ಸೇರ್ಪಡೆಯಾದ ಕುರಿತ ಪ್ರಶ್ನೆಗೆ ಉತ್ತರಿಸುತ್ತ ಅವರು ಹೇಳಿದರು.

ಸಿಂಧ್ಯರ ಹುಟ್ಟೂರು ಗ್ವಾಲಿಯರ್‍ ಗೆ ಎರಡು ದಿನಗಳ ಸಂದರ್ಶನಕ್ಕೆ ಸಚಿನ್ ಬಂದಿದ್ದಾರೆ. ರಾಜಕೀಯದಲ್ಲಿ ಎಲ್ಲರಿಗೂ ಅವರದ್ದೇ ಆದ ತೀರ್ಮಾನಗಳನ್ನು ಕೈಗೊಳ್ಳುವ ಸ್ವಾತಂತ್ರ್ಯ ಇದೆ. ನಾನು ನನ್ನ ಪಾರ್ಟಿಗೂ ಸಿಂಧ್ಯ ಅವರ ಪಾರ್ಟಿಗೂ ಪ್ರಚಾರ ಮಾಡುತ್ತಿದ್ದೇವೆ. ಆದರೆ ಇಲ್ಲಿ ವ್ಯಕ್ತಿಗಳಲ್ಲ ಆಶಯ ಮುಖ್ಯವಾಗಿದೆ. ಹಿಂದಿನ ದಿನಗಳಲ್ಲಿಯೂ ತಾನು ಮಧ್ಯಪ್ರದೇಶಕ್ಕೆ ಪ್ರಚಾರಕ್ಕಾಗಿ ಬಂದಿದ್ದೇನೆ. ಈಗ ಪುನಃ ಪಾರ್ಟಿ ಪ್ರಚಾರಕ್ಕೆ ಬರಲು ಹೇಳಿದೆ. ನಾನು ಒಪ್ಪಿಕೊಂಡೆ. ಕಾಂಗ್ರೆಸ್ ಕಳೆದ 20 ವರ್ಷಗಳಲ್ಲಿ ನನಗೆ ಬಹಳಷ್ಟು ನೀಡಿದೆ. ಜಾತ್ಯತೀತತೆಯನ್ನು ಬಿಗಿಯಾಗಿ ಹಿಡಿದು ಎಲ್ಲರನ್ನೂ ಮುನ್ನಡೆಸುವ ಕಾಂಗ್ರೆಸ್ಸಿನ ಆಶಯ ಉನ್ನತವಾದುದು. ಅದು ಈ ಸಂದರ್ಭದಲ್ಲಿ ದೇಶಕ್ಕೆ ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆ. ಕಾಂಗ್ರೆಸನ್ನು ಎದುರಿಸಲು ಭಾರತದಲ್ಲಿ ಕಾಂಗ್ರೆಸ್‍ಗೆ ಮಾತ್ರ ಸಾಧ್ಯವಿದೆ ಎಂದು ಸಚಿನ್ ಹೇಳಿದರು.

ಉಪಚುನಾವಣೆಯಲ್ಲಿ ಜನವಿರೋಧಿ ಬಿಜೆಪಿಯನ್ನುಸೋಲಿಸುವುದು ಅನಿವಾರ್ಯವಾಗಿದೆ ಎಂದು ಸಚಿನ್ ಪೈಲಟ್ ಟ್ವೀಟ್ ಮಾಡಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪುಟವನ್ನು like ಮಾಡಿ ನಮ್ಮನ್ನು ಬೆಂಬಲಿಸಿ.