ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಅ. 27: ಕಾಂಗ್ರೆಸ್ ನಾಯಕರಾದ ದಿಗ್ವಿಜಯ ಸಿಂಗ್, ಕಮಲ್ನಾಥ್ರ ವಿರುದ್ಧ ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗೀಯರು ನೀಡಿದ ಚಿನ್ನು ಮುನ್ನು ಹೇಳಿಕೆಗೆ ಚುನಾವಣಾ ಆಯೋಗ ಕ್ರಮ ಜರಗಿಸಿದೆ. ಹೇಳಿಕೆಯ ಬಗ್ಗೆ ವಿವರಣೆ ನೀಡುವಂತೆ ಕೈಲಾಶ್ರಿಗೆ ಚುನಾವಣಾ ಆಯೋಗ ನೋಟೀಸು ಜಾರಿಗೊಳಿಸಿದೆ.
48 ಗಂಟೆಗೊಳಗೆ ಉತ್ತರ ನೀಡಬೇಕು ಎಂದು ಅದು ಸೂಚಿಸಿದ್ದು ಅಕ್ಟೋಬರ್ 14ಕ್ಕೆ ಇಂದೋರಿನಲ್ಲಿ ನಡೆದ ರ್ಯಾಲಿಯಲ್ಲಿ ಕೈಲಾಶ್ ವಿಜಯವರ್ಗೀಯ ಕಾಂಗ್ರೆಸ್ ನಾಯಕರ ವಿರುದ್ಧ ಈ ರೀತಿ ವ್ಯಂಗ್ಯವಾಡಿದ್ದರು.
ಓದುಗರೇ, sanmarga ಫೇಸ್ ಬುಕ್ ಪುಟವನ್ನು like ಮಾಡಿ ನಮ್ಮನ್ನು ಬೆಂಬಲಿಸಿ.












