ಸನ್ಮಾರ್ಗ ವಾರ್ತೆ
ಅಣಜಾರಮ ಅ,30: ವಿವಾದಗಳಿಗೆ ನಿರಂತರ ಕೊಳ್ಳಿಯಿಡುವುದರಲ್ಲಿ ಕುಪ್ರಸಿದ್ಧಿ ಸಿಕ್ಕಿರುವ ಫ್ರೆಂಚ್ ಮ್ಯಾಗಝಿನ್ ಚಾರ್ಲಿ ಹೆಬ್ಡೊ ಟರ್ಕಿ ಅಧ್ಯಕ್ಷ ರಜಬ್ ತಯ್ಯಿಬ್ ಉರ್ದುಗಾನ್ರನ್ನು ಅಪಹಾಸ್ಯ ಮಾಡಿ ಕಾರ್ಟೂನ್ ಹೊರತಂದಿದ್ದು ಇದು ಈಗ ಚರ್ಚಾ ವಿಷಯವಾಗಿದೆ. ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೇಲ್ ಮ್ಯಾಕ್ರೋನ್ರ ವಿರುದ್ಧ ಶಕ್ತವಾದ ರೀತಿಯಲ್ಲಿ ಉರ್ದುಗಾನ್ ವಿರೋಧಿಸಿದ್ದರು. ಮತ್ತು ಫ್ರೆಂಚ್ ಉತ್ಪನ್ನಗಳನ್ನು ಬಹಿಷ್ಕರಿಸಲು ಜನರಿಗೆ ಕರೆ ನೀಡಿದ್ದು ಹೆಬ್ಡೊದ ಕೋಪಕ್ಕೆ ಕಾರಣವಾಗಿದೆ. ತದನಂತರ ಹೆಬ್ಡೊ ಮುಖಪುಟದಲ್ಲಿ ಉರ್ದುಗಾನ್ರನ್ನು ನಿಕೃಷ್ಟವಾದ ರೀತಿಯಲ್ಲಿ ಚಿತ್ರೀಕರಿಸಲಾಗಿದೆ.
ಇದರ ವಿರುದ್ಧ ವ್ಯಾಪಕ ಪ್ರತಿಭಟನೆ ಟರ್ಕಿಯಲ್ಲಿ ಹುಟ್ಟಿಕೊಂಡಿದೆ. ಹೆಬ್ಡೊದ ನೀಚ, ಹೀನ ಕ್ರಮ ಇದೆಂದು ಉರ್ದುಗಾನ್ ಹೇಳಿದರು. ಅದರ ಮಾಲಕರ ವಿರುದ್ಧ ತನಿಖೆ ಆರಂಭಿಸಲಾಗಿದೆ. ಅವರ ವಿರುದ್ಧ ಖಂಡನೆ ವ್ಯಕ್ತಪಡಿಸಲಾಗಿದೆ ಎಂದು ಟರ್ಕಿಯ ಚೀಫ್ ಪ್ರಾಸಿಕ್ಯೂಟರ್ರನ್ನು ಉದ್ಧರಿಸಿ ಮಾಧ್ಯಮಗಳಲ್ಲಿ ವರದಿಯಾಗಿದೆ.
ಪ್ರವಾದಿ ಮುಹಮ್ಮದರನ್ನು(ಸ) ಅವಹೇಳನಗೊಳಿಸಿದ ಹೆಬ್ಡೊ ಈಗ ತನ್ನನ್ನು ಗುರಿಯಾಗಿಟ್ಟಿದೆ. ಹೆಬ್ಡೊದ ನಿಕೃಷ್ಟ ಹೀನವಾದ ಕೃತ್ಯವಿದು ಎಂದು ಉರ್ದುಗಾನ್ ತನ್ನ ಪಾಟಿರ್ಯನ್ನು ಉದ್ದೇಶಿಸಿ ಮಾತಾಡುತ್ತಾ ಪಾರ್ಲಿಮೆಂಟಿನಲ್ಲಿ ಹೇಳಿದರು. ನಾನು ಆಕ್ಯಾರಿಕೇಚರ್ ನೋಡಿಲ್ಲ. ಯಾಕೆಂದರೆ ಅನೈತಿಕ ಎಡಿಟೊರಿಯಲ್ ನೀತಿಯಿರುವ ಒಂದು ಮ್ಯಾಗಝಿನ್ ನೋಡಿ ಅದಕ್ಕೆ ಕ್ರೆಡೆಟ್ ನೀಡಲು ತಾನು ಬಯಸಿಲ್ಲ. ನಮ್ಮ ಪ್ರವಾದಿಯನ್ನು ಅಪಮಾನಿಸಿದ ಈ ಅಪಹಾಸಿಗಳ ಕುರಿತು ನನಗೆ ಏನೂ ಹೇಳಲಿಕ್ಕಿಲ್ಲ ಎಂದು ಉರ್ದುಗಾನ್ ಹೇಳಿದರು.
ಉರ್ದುಗಾನ್ರನ್ನು ಅಪಮಾನಿಸಿದವರನ್ನು ಜವಾಬ್ದಾರಿಯಿಂದ ಕಾನೂನಿನ ಮುಂದೆ ತರಲು ಟರ್ಕಿ ಕಾನೂನು ರಾಜತಾಂತ್ರಿಕವಾದ ಎಲ್ಲ ಕ್ರಮಗಳನ್ನು ಸ್ವೀಕರಿಸಲಿದೆ ಎಂದು ಅಧ್ಯಕ್ಷರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ. ತೀರ ದ್ವೇಷಹುಟ್ಟಿಸುವ ಇಸ್ಲಾಮೊಫೋಬಿಯದ ವಿರುದ್ಧ ಈಕ್ರಮವೆಂದು ಟರ್ಕಿ ಹೇಳಿತು.
ಟೀ ಶರ್ಟ್, ಒಳ ಉಡುಪು ಮಾತ್ರ ಧರಿಸಿದ ಉರ್ದುಗಾನ್ ಹಿಜಾಬ್ ಧರಿಸಿದ ಓರ್ವ ಮಹಿಳೆಯ ಬಟ್ಟೆಯನ್ನು ಎತ್ತಿ ನೋಡುವ ಕಾರ್ಟೂನನ್ನು ಚಾರ್ಲಿ ಹೆಬ್ಡೊ ಪ್ರಕಟಿಸಿತ್ತು. ಉರ್ದುಗಾನ್ ಓ ಪ್ರವಾದಿ ಎಂದು ಹೇಳುವುದು ಚಿತ್ರದಲ್ಲಿದೆ. ಮಹಿಳೆಯ ಕೈಯಲ್ಲಿ ಮದ್ಯದ ಬಾಟ್ಲಿಯಿದೆ. ಉರ್ದುಗಾನ್ ಖಾಸಗಿಯಾಗಿ ತುಂಬ ತಮಾಷೆಯ ವ್ಯಕ್ತಿ ಎಂದು ಚಿತ್ರಕ್ಕೆ ತಲೆಬರಹ ಕೊಡಲಾಗಿದೆ.
ಕಾರ್ಟೂನ್ ಹೊರಬರುವುದರೊಂದಿಗೆ ಟರ್ಕಿಯಲ್ಲಿ ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ. ಜನರು ಬೀದಿಗಿಳಿದಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ, ಫ್ರಾನ್ಸಿನಲ್ಲಿ ಚಾರ್ಲಿ ಹೆಬ್ಡೊ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ.












