12 ರಿಂದ 18ವರ್ಷ ವಯಸ್ಸಿನೊಳಗಿನವರಿಗೆ ಕೊರೋನ ವ್ಯಾಕ್ಸಿನ್ ಪರೀಕ್ಷೆ: ಜಾನ್ಸನ್ ಆಂಡ್ ಜಾನ್ಸನ್‌ನಿಂದ ಸಿದ್ಧತೆ

0
483

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ಅ.31: 12 ವರ್ಷದಿಂದ 18 ವರ್ಷ ವಯೋಮಾನದವರಲ್ಲಿ ಕೊರೋನ ವ್ಯಾಕ್ಸಿನ್ ಪರೀಕ್ಷೆಗೆ ಜಾನ್ಸನ್ ಆಂಡ್ ಜಾನ್ಸನ್ ಸಿದ್ಧತೆ ನಡೆಸುತ್ತಿದೆ. ಅಮೆರಿಕದಲ್ಲಿ ಶುಕ್ರವಾರ ನಡೆದ ವರ್ಚುವಲ್ ಸಭೆಯಲ್ಲಿ ಈ ವಿಷಯದಲ್ಲಿ ನಿರ್ಧಾರವಾಗಿದೆ ಎಂದು ಕಂಪೆನಿ ಪ್ರತಿನಿಧಿ ತಿಳಿಸಿದ್ದಾರೆ. ವಿಳಂಬವಿಲ್ಲದೆ ಮಕ್ಕಳಲ್ಲಿ ಮದ್ದು ಪರೀಕ್ಷೆ ನಡೆಸಲಾಗುವುದು.

ಆದರೆ, ತುಂಬ ಶ್ರದ್ಧೆಯಿಂದ ಮಾತ್ರ ಈ ಘಟ್ಟಕ್ಕೆ ಹೋಗುವುದು. ಮಕ್ಕಳಲ್ಲಿ ಪರಿಕ್ಷೆ ನಡೆಸುವಾಗ ಸುರಕ್ಷೆಗೆ ಅತ್ಯಂತ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುವುದು. ಪರೀಕ್ಷೆಗೆ ನೇತೃತ್ವ ನೀಡುತ್ತಿರುವವರಲ್ಲಿ ಒಬ್ಬರಾದ ಡಾ.ಜೆರಿ ಸಾಂಡೊಫ್ ಹೇಳಿದರು.

60,000 ಸ್ವಯಂ ಸೇವಕರಲ್ಲಿ ಕಂಪೆನಿ ವ್ಯಾಕ್ಸಿನ್ ಮೂರನೇ ಹಂತದ ಪರೀಕ್ಷೆಯನ್ನು ಕಳೆದ ಸೆಪ್ಟಂಬರಿನಲ್ಲಿ ಆರಂಭಿಸಲಾಗಿತ್ತು. ನಂತರ ಇದು ನಿಲ್ಲಿಸಲಾಗಿತ್ತು. ಒಬ್ಬರಲ್ಲಿ ಅಡ್ಡ ಪರಿಣಾಮ ಕಂಡು ಬಂದದ್ದರಿಂದ ಈ ಕ್ರಮ ತೆಗೆದುಕೊಳ್ಳಲಾಗಿತ್ತು. ನಂತರ ವ್ಯಾಕ್ಸಿನ್ ಪರೀಕ್ಷೆಯನ್ನು ಕಳೆದ ವಾರ ಪುನರಾರಂಭಿಸಲಾಗಿದೆ. ಜಾನ್ಸನ್ ಆಂಡ್ ಜಾನ್ಸನ್‍ನ ಪ್ರಧಾನ ಪ್ರತಿಸ್ಪರ್ಧಿ ಫಿಸರ್ 12 ವರ್ಷದವರೆಗಿನ ಮಕ್ಕಳಲ್ಲಿ ವ್ಯಾಕ್ಸಿನ್ ಪರೀಕ್ಷೆ ಆರಂಭಿಸಿತ್ತು.