ಮಕ್ಕ ಹರಮ್ ಮಸೀದಿಗೆ ಕಾರು ಚಲಾಯಿಸಿಕೊಂಡು ಹೋದ ವ್ಯಕ್ತಿಯ ಬಂಧನ- ವೀಡಿಯೊ

0
1340

ಸನ್ಮಾರ್ಗ ವಾರ್ತೆ

ಮಕ್ಕ,ಅ.31: ಹರಮ್ ಮಸೀದಿಗೆ ಕಾರು ಚಲಾಯಿಸಿಕೊಂಡು ಹೋದ ಯುವಕನನ್ನು ಸೌದಿ ಅರೇಬಿಯ ಪೊಲೀಸರು ಬಂಧಿಸಿದ್ದಾರೆ. ಶುಕ್ರವಾರ ರಾತ್ರೆ 1:30ಕ್ಕೆ ಘಟನೆ ನಡೆದಿದೆ. ಜನ ನಿಭಿಡತೆಯಿಲ್ಲದುದರಿಂದ ಯಾರೂ ಗಾಯಗೊಂಡಿಲ್ಲ ಎಂದು ಸೌದಿ ಅರೇಬಿಯದ ಪತ್ರಿಕೆ ಒಕಾಸ್ ವರದಿ ಮಾಡಿದೆ. ಕಾರು ಚಲಾಯಿಸಿಕೊಂಡು ಬಂದ ವ್ಯಕ್ತಿ ಮಾನಸಿಕ ಅಸ್ವಾಥ್ಯವಿರುವವನೆಂದು ಸೌದಿ ಅಧಿಕಾರಿಗಳು ತಿಳಿಸಿದ್ದಾರೆ. ಸೌದಿ ಪ್ರಜೆಯಾದ ಈತನ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಕಾಬ ಇರುವ ಹರಮ್ ಮಸೀದಿಯ ದಕ್ಷಿಣ ಭಾಗದ ರಸ್ತೆಯಲ್ಲಿ ಅತಿವೇಗದಿಂದ ಬಂದ ಕಾರು ನಿಯಂತ್ರಣ ಕಳಕೊಂಡು ಹರಮ್‍ನ ಒಂದು ಬಾಗಿಲಿಗೆ ಢಿಕ್ಕಿಯಾಗಿ ಒಳಬಂದಿತ್ತು. ಒಳಗಿದ್ದ ಬ್ಯಾರಿಕೇಡ್‍ಗಳನ್ನು ದೂಡಿ ಹಾಕಿ ಕಾರು ಮುಂದೆ ಚಲಿಸಿದೆ. ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರವಾಗುತ್ತಿದೆ. ಸಾಮಾನ್ಯವಾಗಿ ಜನರಿಂದ ತುಂಬಿತುಳುಕಿರುತ್ತಿದ್ದ ರಸ್ತೆಯಲ್ಲಿ ಕೊರೋನದ ಹಿನ್ನೆಲೆಯಲ್ಲಿ ಈಗ ಕಠಿಣ ನಿಯಂತ್ರಣವಿದೆ. ಮತ್ತು ಕಡಿಮೆ ಸಂಖ್ಯೆಯಲ್ಲಿ ಜನರು ಇದ್ದರು.