ಪುಲ್ವಾಮ ಯೋಧರ ಶೋಕದಲ್ಲಿ ಕೆಲವರು ಭಾಗಿಯಾಗಲಿಲ್ಲ- ವಿರೋಧ ಪಕ್ಷಗಳ ಮೇಲೆ ಪ್ರಧಾನಿ ಮೋದಿ ವಾಗ್ದಾಳಿ

0
497

ಸರ್ದಾರ್ ಪಟೇಲ್‌ರವರ 145ನೇ ಜನ್ಮದಿನ

ಸನ್ಮಾರ್ಗ ವಾರ್ತೆ

ಸರ್ದಾರ್ ಪಟೇಲ್ ಅವರ 145ನೇ ಜನ್ಮದಿನದ ಅಂಗವಾಗಿ ಮೋದಿಯವರು ಕೆವಾಡಿಯಾದ ಸ್ಟ್ಯಾಚ್ಯು ಆಫ್ ಯೂನಿಟಿ ಬಳಿ ನಡೆದ ಏಕತಾ ದಿನದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಇಂದು ಮೋದಿಯವರ ಗುಜರಾತ್ ಭೇಟಿಯ ಎರಡನೆ ದಿನವಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಅವರು “ಪುಲ್ವಾಮಾ ದಾಳಿಯ ನಂತರ, ಧೈರ್ಯಶಾಲಿ ಪುತ್ರರ ನಿಧನದಿಂದ ಇಡೀ ದೇಶವು ದುಃಖತಪ್ತವಾದಾಗ ಕೆಲವರು ಆ ದುಃಖದಲ್ಲಿ ಭಾಗಿಯಾಗಿರಲಿಲ್ಲ ಎಂಬುದನ್ನು ಅವರು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರು ಪುಲ್ವಾಮಾ ದಾಳಿಯಲ್ಲಿ ತಮ್ಮ ರಾಜಕೀಯ ಮಾಡಲು ಬಯಸುತ್ತಿದ್ದಾರೆ” ಎಂದು ಅವರು ಪರೋಕ್ಷವಾಗಿ ವಿರೋಧ ಪಕ್ಷಗಳ ಮೇಲೆ ಹರಿಹಾಯ್ದರು.

ಪ್ರಧಾನಿ ನರೇಂದ್ರ ಮೋದಿಯವರು ನೀಡಿದ 37 ನಿಮಿಷಗಳ ಭಾಷಣದಲ್ಲಿ, ಪುಲ್ವಾಮಾ ದಾಳಿಯ ಸಮಯದಲ್ಲಿ ರಾಜಕೀಯ ಷಡ್ಯಂತ್ರ, ನೆರೆಯ ದೇಶಗಳು, ವಿರೋಧ ಪಕ್ಷಗಳ ಮೇಲೆ ವಾಗ್ದಾಳಿ, ಚೀನಾ-ಪಾಕಿಸ್ತಾನ ಹೆಸರು ಉಚ್ಚರಿಸದೇ ಅವುಗಳಿಗೆ ಸವಾಲು ಸೇರಿದಂತೆ 370ನೇ ವಿಧಿಯನ್ನು ತೆಗೆದುಹಾಕುವುದರೊಂದಿಗೆ ಪಟೇಲ್ ಅವರ ಕನಸು ನನಸಾಗಿದೆ ಎಂಬುದಾಗಿ ಅವರು ಹೇಳಿದರು.

ಮೋದಿಯವರು ನಿರುದ್ಯೋಗ, ಬಡತನ ಸೇರಿದಂತೆ ದೇಶದ ಆರ್ಥಿಕ ಸಂಕಷ್ಟಗಳ ಕುರಿತು ಈ ಸಂದರ್ಭದಲ್ಲಿ ಅವರು ಮಾತೆತ್ತಲಿಲ್ಲ.