ತೆಲಂಗಾಣ| ಬಿಜೆಪಿ ಅಭ್ಯರ್ಥಿಯ ಸಂಬಂಧಿಯ ಕಾರಿನಿಂದ ಒಂದು ಕೋಟಿ ರೂ. ವಶ

0
659

ಸನ್ಮಾರ್ಗ ವಾರ್ತೆ

ಹೈದರಾಬಾದ್: ತೆಲಂಗಾಣದಲ್ಲಿ ಬಿ.ಜೆ.ಪಿ ಅಭ್ಯರ್ಥಿಯ ಪತ್ನಿಯ ಸಹೋದರ ಮತ್ತು ಸ್ನೇಹಿತ ಅಕ್ರಮವಾಗಿ ಕಾರಿನಲ್ಲಿ ಸಾಗಿಸುತ್ತಿದ್ದ ಒಂದು ಕೋಟಿ ರೂಪಾಯಿಗಳನ್ನು ಕಮಿಷನ್ ಟಾಸ್ಕ್ ಫೋರ್ಸ್ ಮತ್ತು ಬೇಗಂಪೆಟ್ ಪೋಲಿಸರು ಸೇರಿ ಬೇಗಂಪೆಟ್ ಮಲ್ಸೇತುವೆ ಸಮೀಪದಿಂದ ವಶಪಡಿಸಿಕೊಂಡಿದ್ದಾರೆ.

ದಬಾಕಿಯಲ್ಲಿ ಮಂಗಳವಾರ ಉಪಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಮತದಾರರಿಗೆ ವಿತರಿಸುವ ನಿಟ್ಟಿನಲ್ಲಿ ಹಣವನ್ನು ಸಾಗಿಸುತ್ತಿದ್ದರು. ಘಟನೆಯಲ್ಲಿ ದಬಾಕ್ ಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿ ಎಂ. ರಘುನಂದನ್ ರಾವ್‌ನ ಪತ್ನಿ ಸಹೋದರ ಸುರಭಿ ಶ್ರೀನಿವಾಸ ರಾವ್(47) ಮತ್ತು ರವಿ ಕುಮಾರ್(33) ಎಂಬವರನ್ನು ಬಂಧಿಸಲಾಗಿದ್ದು, ಈರ್ವರೂ ಉಧ್ಯಮಿಗಳಾಗಿರುತ್ತಾರೆ. ‌

500 ಮತ್ತು 2000 ಮುಖಬೆಲೆಯ ನೋಟುಗಳನ್ನು ಪೋಲೀಸರು ವಶ್ಕೆ ಪಡೆದುಕೊಂಡಿದ್ದಾರೆ. ಮೊಬೈಲ್ ಫೋನ್ ಪರಿಶೀಲನೆಯಲ್ಲಿ ಮೊತ್ತಕ್ಕೆ ದಬಾಕಿನ ಬಿ.ಜೆ.ಪಿ ಅಭ್ಯರ್ಥಿಗೆ ನೇರ ಸಂಬಂಧವಿರುವುದಾಗಿ ಮಾಹಿತಿ ಲಭಿಸಿದೆ ಎಂದು ಹೈದರಾಬಾದ್ ಪೋಲೀಸ್ ಕಮಿಷನರ್ ಅಂಜನಿ ಕುಮಾರ್ ತಿಳಿಸಿದ್ದಾರೆ.

ಪೆಡಪ್ಪಳ್ಳಿ ಕ್ಷೇತ್ರದ ಮಾಜಿ ಎಂ.ಪಿ ಜಿ. ವಿವೇಕ್ ವೆಂಕಟಸ್ವಾಮಿಯ ಮಾಲೀಕತ್ವದಲ್ಲಿರುವ ವಿಶಾಖ ಇಂಡಸ್ಟ್ರೀಸ್‌ನ ಬೇಗಂಪೆಟ್ ಕಛೇರಿಯಿಂದ ಹಣ ಸಾಗಿಸುತ್ತಿದ್ದರೆಂಬುದು ತನಿಖೆಯಲ್ಲಿ ವ್ಯಕ್ತವಾಗಿದೆ.