ದಿಲ್ಲಿಯಿಂದ ವುಹಾನ್‍ಗೆ ಪ್ರಯಾಣಿಸಿದ 19 ಮಂದಿಗೆ ಕೊರೋನ

0
576

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ನ.3: ಏರ್ ಇಂಡಿಯಾ ವಿಮಾನದಲ್ಲಿ ಚೀನದ ವುಹಾನ್‍ಗೆ ಪ್ರಯಾಣಿಸಿದ 19 ಪ್ರಯಾಣಿಕರಿಗೆ ಕೊರೋನ ಸೋಂಕು ತಗುಲಿರುವುದು ದೃಢಪಟ್ಟಿದೆ. ಶುಕ್ರವಾರ ವಂದೇ ಭಾರತ್ ಮಿಷನ್ ಭಾಗವಾಗಿ ವುಹಾನಿಗೆ ಪ್ರಯಾಣಿಸಿದವರಲ್ಲಿ ಕೊರೊಓನ ದೃಢಪಟ್ಟಿದ್ದು ಎಲ್ಲ ಸುರಕ್ಷೆ ಮಾನದಂಡಗಳನ್ನು ಪಾಲಿಸಿ ಯಾತ್ರಿಕರನ್ನು ಕರೆತರಲಾಗಿತ್ತು ಎಂದು ಏರ್‍ ಇಂಡಿಯಾ ಸ್ಪಷ್ಟಣೆ ನೀಡಿದೆ. ವುಹಾನಿಗೆ ಹೊರಟಿದ್ದ ಎಲ್ಲ ಪ್ರಯಾಣಿಕರ ಕೈಯಲ್ಲಿ ಅಂಗೀಕೃತ ಲ್ಯಾಬಿನಿಂದ ಪಡೆದ ಕೊರೋನ ನೆಗಟಿವ್ ಸರ್ಟಿಫಿಕೇಟ್ ಗಳಿದ್ದವು ಎಂಬುದಾಗಿ ಏರ್ ಇಂಡಿಯಾ ತಿಳಿಸಿದೆ.

ಎರಡು ಪರೀಕ್ಷೆಯ ನಂತರ ಎಲ್ಲ ಭಾರತೀಯ ಪ್ರಯಾಣಿಕರನ್ನು ವಿಮಾನಕ್ಕೆ ಹತ್ತಲು ಅನುಮತಿಸಲಾಗಿದೆ. ರೋಗ ದೃಢಪಟ್ಟ 19ಮಂದಿಯ ಹೊರತು ಇತರ 38 ಮಂದಿ ರೋಗಿಗಳಿಗೂ ರೋಗ ಬರುವ ಸಾಧ್ಯತೆ ಇದೆ. ಆದುದ್ದರಿಂದ ಎಲ್ಲ 58 ಪ್ರಯಾಣಿಕರನ್ನು ಕೊರೋನ ಆಸ್ಪತ್ರೆಗೆ ಕಳುಹಿಸಿಕೊಡುತ್ತೇವೆ ಎಂದು ಚೀನದ ಅಧಿಕಾರಿಗಳು ಹೇಳಿದ್ದಾರೆ.

ವಂದೇ ಭಾರತ್‍‌ನ ಭಾಗವಾಗಿ ಇದುವರೆಗೆ ಆರು ವಿಮಾನಗಳು ಚೀನಕ್ಕೆ ತೆರಳಿವೆ. ಆದರೆ, ವುಹಾನಕ್ಕೆ ಪ್ರಥಮ ಬಾರಿ ವಿಮಾನ ಹೋಗಿದೆ. ಚೀನದ ಕೊರೋನ ಪ್ರಭಾವ ಕೇಂದ್ರ ವುಹಾನ್ ಆಗಿದೆ. ಚೀನದ ಮಾನದಂಡದ ಪ್ರಕಾರ ಕೊರೋನ ಫಲಿತಾಂಶ ನೆಗಟಿವ್ ಆಗುವವರೆಗೆ ವಿಶೇಷ ಕೇಂದ್ರದಲ್ಲಿ ಎಲ್ಲರನ್ನೂ ಇರಿಸಲಾಗುವುದು. ನೆಗೆಟಿವ್ ಆದ ಬಳಿಕ ಮಾತ್ರ ಹೊರಗೆ ಹೋಗಗೊಡಲಾಗುವುದು. ಎಲ್ಲ ಪ್ರಯಾಣಿಕರು 14 ದಿವಸಗಳ ನಿರ್ಬಂಧಿತ ಕ್ವಾರಂಟೈನ್‍ನಲ್ಲಿಬೇಕೆಂದು ಸೂಚಿಸಲಾಗಿದೆ.