ಜೋರ್ಡಾನಿನಲ್ಲಿ ಫ್ರೆಂಚ್ ಉತ್ಪನ್ನಗಳಿಗೆ ಬಹಿಷ್ಕಾರ

0
485

ಸನ್ಮಾರ್ಗ ವಾರ್ತೆ

ಅಮ್ಮಾನ್,ನ.3: ಫ್ರೆಂಚ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರೋನ್‍ರ ಮುಸ್ಲಿಂ ವಿರೋಧಿ ಹೇಳಿಕೆಯನ್ನು ಪ್ರತಿಭಟಿಸಿ ಜೋರ್ಡಾನಿನ ಸೂಪರ್ ಮಾರ್ಕೆಟ್‍ನಿಂದ ಫ್ರೆಂಚ್ ಉತ್ಪನ್ನಗಳನ್ನು ತೆರವುಗೊಳಿಸಲಾಗಿದೆ. ಮಧ್ಯಪ್ರಾಚ್ಯದಲ್ಲಿರುವ ಎಲ್ಲ ಸೂಪರ್ ಮಾರ್ಕೆಟ್ ಶೃಂಖಲೆ ಫ್ರೆಂಚ್ ಉತ್ಪನ್ನಗಳನಗನು ಕಪಾಟಿನಿಂದ ತೆಗೆದಿಟ್ಟಿದೆ. ಮೇಕಪ್, ಡೈರಿ, ವಿವಿಧ ಬ್ರಾಂಡ್‍ಗಳ ಅಡಿಗೆ ಪಾತ್ರೆಗಳು ಬಹಿಷ್ಕಾರದ ಭಾಗವಾಗಿ ಅದಕ್ಕೆ ಬಟ್ಟೆಯಿಂದ ಕಾಣದಂತೆ ಮಾಡಲಾಗಿದೆ. ಪ್ರವಾದಿ ಮುಹಮ್ಮದ್‌ರೊಂದಿಗೆ ಬೆಂಬಲ, ಅವರಿಗೆ ಶಾಂತಿಯಿರಲಿ. ಎಲ್ಲ ಫ್ರೆಂಚ್ ಉತ್ಪನಗಳನ್ನು ಬಹಿಷ್ಕರಿಸಲಾಗಿದೆ ಎಂದು ಅರಬಿ ಭಾಷೆಯಲ್ಲಿ ಬರೆದ ಪೇಪರನ್ನೂ ಈ ಉತ್ಪನ್ನಗಳನ್ನಿರಿಸಲಾದ ರ‌್ಯಾಕ್‌ಗಳಿಗೆ ಅಂಟಿಸಲಾಗಿದೆ.

ಮ್ಯಾಕ್ರೋನ್‍ರ ಕೆಟ್ಟ ಹೇಳಿಕೆ ಈ ನಿರ್ಧಾರಕ್ಕೆ ಕಾರಣವಾಗಿದೆ ಎಂದು ಸೂಪರ್ ಮಾರ್ಕೆಟ್ ಮ್ಯಾನೇಜರ್ ಸಹರ್ ದಿರ್‍ಬಶಿ ಹೇಳಿದರು. ನಮ್ಮ ಜಾತ್ಯತೀತತೆ ಮತ್ತು ಅದರ ತತ್ವಸಂಹಿತೆಗಳನ್ನು ಫ್ರಾನ್ಸ್‌ನ ಜನರು ಗೌರವಿಸುತ್ತಾರೆ. ಅಭಿಪ್ರಾಯ ಹೇಳುವುದಕ್ಕೆ ಸ್ವಾತಂತ್ರ್ಯವನ್ನೂ ನೀಡುತ್ತದೆ. ಅವರದನ್ನು ಕಾರ್ಟೂನ್ ಮೂಲಕ ತೋರಿಸುತ್ತಿದ್ದಾರೆ. ನಾವು ಅರ್ಥ ವ್ಯವಸ್ಥೆಗಳ ಮೂಲಕ ಪ್ರಕಟಿಸುತ್ತೇವೆ. ಕೊನೆಯಲ್ಲಿ ಯಾರು ಹೆಚ್ಚು ಬಲಿಷ್ಠರೆಂಬುದನ್ನು ನಾವು ನೋಡುತ್ತೇವೆ ಎಂದು ಮ್ಯಾನೇಜರ್ ಹೇಳಿದರು.

ಫ್ರಾನ್ಸಿನಲ್ಲಿ ಮಾತ್ರವಲ್ಲ ಇಡೀ ಜಗತ್ತಿನಲ್ಲಿ ಭಾರೀ ಸಮಸ್ಯೆ ಎದುರಿಸುತ್ತಿರುವ ಧರ್ಮ ಇಸ್ಲಾಂ ಆಗಿದೆ ಎಂದು ಫ್ರೆಂಚ್ ಅಧ್ಯಕ್ಷ ಇಮ್ಯಾನುವೇಲ್ ಮ್ಯಾಕ್ರೋನ್ ಇತ್ತೀಚೆಗೆ ಹೇಳಿಕೆ ನೀಡಿದ್ದು ವಿವಾದವಾಗಿತ್ತು. ಮ್ಯಾಕ್ರೋನ್ ಹೇಳಿಕೆಯ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆದಿತ್ತು. ಫ್ರಾನ್ಸಿನಲ್ಲಿ ಪ್ರವಾದಿ ಮುಹಮ್ಮದ್‌(ಸ) ಕ್ಯಾರಿಕೇಚರನ್ನು ತಂದ ಇತಿಹಾಸ ಅಧ್ಯಾಪಕನು ಕೊಲ್ಲಲ್ಪಟ್ಟ ಘಟನೆಯ ಹಿಂದೆ ವಿವಾದಗಳು ಹೆಚ್ಚು ತೀವ್ರಗೊಂಡಿವೆ.