ಸನ್ಮಾರ್ಗ ವಾರ್ತೆ
ಕೊಲ್ಕತಾ,ನ.9: ಚುನಾವಣಾ ಪ್ರಚಾರದ ವೇಳೆ ಬಿಜೆಪಿಯ ಪಶ್ಚಿಮ ಬಂಗಾಳದ ಅಧ್ಯಕ್ಷ ದಿಲೀಪ್ ಘೋಷ್ ಸ್ವಭಾವ ಬದಲಾಯಿಸಿಕೊಳ್ಳದಿದ್ದರೆ ಕೈಕಾಲು ತಲೆ ಹೋದೀತು. ಕೊಲ್ಲಲ್ಪಡುವಿರಿ ಎಂದು ಮಮತಾ ಬ್ಯಾನರ್ಜಿ ಬೆಂಬಲಿಗರಿಗೆ ಮುನ್ನೆಚ್ಚರಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ.
ರವಿವಾರ ಹಾಲ್ಡಿಯಲ್ಲಿ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತಾಡುತ್ತಿದ್ದರು. ಸಮಸ್ಯೆ ಸೃಷ್ಟಿಸುತ್ತಿರುವ ದೀದಿಯ ಸಹೋದರರು ಮುಂದಿನ ಆರು ತಿಂಗಳಲ್ಲಿ ಅವರ ಸ್ವಭಾವದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ನಿಮ್ಮ ಕೈಕಾಲು ಪಕ್ಕೆಲುಬು ತಲೆ ಮುರಿಯಲ್ಪಟ್ಟೀತು. ನೀವು ಆಸ್ಪತ್ರೆಗೆ ಹೋಗಬೇಕಾದೀತು. ಹೆಚ್ಚು ಆಟವಾಡಿದರೆ ಸ್ಮಶಾನಕ್ಕೆ ಹೋಗಬೇಕಾದೀತು ಎಂದು ಘೋಷ್ ಹೇಳಿದರು.
ತೃಣಮೂಲ ಕಾಂಗ್ರೆಸ್ನ ದಿನಗಳು ಎಣಿಸಲ್ಪಟ್ಟಿವೆ. ಕೇಂದ್ರ ಸೇನೆ ಸುಗಮ ಚುನಾವಣೆ ನಡೆಸುವಂತೆ ನೋಡಿಕೊಳ್ಳಲಿದೆ ಎಂದು ಅವರು ಹೇಳಿದರು. ಬಿಹಾರದಲ್ಲಿ ಲಾಲು ರಾಜ್ ಆಗಿದ್ದಾಗ ಜಂಗಲ್ ರಾಜ್ ಇತ್ತು. ದಿನಾಲೂ ಅಕ್ರಮಗಳು ನಡೆಯುತ್ತಿದ್ದವು. ನಾವು ಗೂಂಡಾಗಳನ್ನು ಹೊರಗಟ್ಟಿದ್ದೇವೆ. ಇದನ್ನು ಬಿಜೆಪಿ ರಾಜ್ ಎಂದು ಕರೆಯುವುದು. ನಾವು ಜಂಗಲ್ ಅನ್ನು ಪ್ರಜಾಪ್ರಭುತ್ವವನ್ನಾಗಿ ಮಾಡಿದೆವು. ಇನ್ನು ಪಶ್ಚಿಮ ಬಂಗಾಳದಲ್ಲಿ ನಮಗೆ ಪ್ರಜಾಪ್ರಭುತ್ವವವನ್ನು ಮರುಸ್ಥಾಪಿಸಬೇಕಾಗಿದೆ ಎಂದು ಅವರು ಹೇಳಿದರು.
ನಾನು ಒಂದು ವಿಷಯ ಹೇಳಬಯಸುತ್ತಾನೆ. ಮುಂಬರುವ ವಿಧಾನಸಭಾ ಚುನಾವಣೆ ದೀದಿಯ ಪೊಲೀಸರ ಅಧೀನದಲ್ಲಾಗಿರುವುದಿಲ್ಲ. ದಾದಾರ ಪೊಲೀಸರ ಅಧೀನದಲ್ಲಾಗಿರುತ್ತದೆ. ಖಾಕಿ ಹಾಕಿದ ಪೊಲೀಸರು ಬೂತ್ನಿಂದ ನೂರು ಮೀಟರ್ ದೂರ ಮಾವಿನ ಮರದಡಿಯ ಕುರ್ಚಿಯಲ್ಲಿ ಕೈನಿ ಜಗಿಯುತ್ತಾ ಮತದಾನವನ್ನು ನೋಡಲಿದ್ದಾರೆ ಎಂದು ದಿಲೀಪ್ ಘೋಷ್ ಹೇಳಿದರು. ಘೋಷ್ರ ಹೇಳಿಕೆಯನ್ನು ತೃಣಮೂಲ ಕಾಂಗ್ರೆಸ್ ಖಂಡಿಸಿದೆ. ರಾಜ್ಯದ ರಾಜಕೀಯ ವಾತಾವರಣವನ್ನು ದಿಲೀಪ್ ಘೋಷ್ ಮಲಿನಗೊಳಿಸಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ.












