ಸನ್ಮಾರ್ಗ ವಾರ್ತೆ
ಬೆಂಗಳೂರು,ನ.9: ನಿಯೋಜಿತ ಅಮೆರಿಕ ಅಧ್ಯಕ್ಷ ಜೊ ಬೈಡನ್ ಸೋಮವಾರ ಕೊರೋನ ವೈರಸ್ ಟಾಸ್ಕ್ ಫೋರ್ಸ್ಗೆ ಇಂಡೊ-ಅಮೆರಿಕನ್ ಡಾ.ವಿವೇಕ್ ಮೂರ್ತಿ ಸಹ ಅಧ್ಯಕ್ಷರಾಗಲಿದ್ದಾರೆ ಎಂಬುದಾಗಿ ವರದಿಯಾಗಿದೆ. ಪ್ರಚಾರದ ಕಾಲದಲ್ಲಿ ಸಾರ್ವಜನಿಕ ಆರೋಗ್ಯ, ಕೊರೋನ ವೈರಸ್ ವಿಷಯದಲ್ಲಿ ಬೈಡನ್ರ ಉನ್ನತ ಸಲಹೆಗಾರರಲ್ಲಿ ಇವರೂ ಒಬ್ಬರಾಗಿದ್ದರು. ಮೂರ್ತಿಗೆ ಈಗ 43 ವರ್ಷ ವಯಸ್ಸು.
ಬೈಡನ್ಗೆ ನಿಕಟರಾಗಿರುವ ವಿವೇಕ್ ಮೂರ್ತಿ ಟಾಸ್ಕ ಫೋರ್ಸ್ನ ಸಹಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸುವುದನ್ನು ಎಲ್ಲರೂ ನಿರೀಕ್ಷಿಸುತ್ತಿದ್ದಾರೆ. ಕರ್ನಾಟಕದ ಮಂಡ್ಯದಲ್ಲಿ ವಿವೇಕ್ರ ಕುಟುಂಬದ ಬೇರಿದೆ. ವಿವೇಕ್ ಮೂರ್ತಿ 2014ರಲ್ಲಿ ಬರಾಕ್ ಒಬಾಮರ ಆಡಳಿತದಲ್ಲಿ ಅಮೆರಿಕದ 19ನೆ ಸರ್ಜನ್ ಜನರಲ್ ಆಗಿ ಕೆಲಸ ಮಾಡಿದ್ದರು. ನಂತರ ಡೊನಾಲ್ಡ್ ಅಧಿಕಾರಕ್ಕೆ ಬಂದಾಗ ಅವರು ಸ್ಥಾನವನ್ನು ತೆರವುಗೊಳಿಸಿದ್ದರು, ಕೊರೋನ ಟಾಸ್ಕ್ ಫೋರ್ಸ್ನಲ್ಲಿ ವಿವೇಕ್ ಮೂರ್ತಿ ಇರುವರೇ ಎಂಬ ಆಕಾಂಕ್ಷೆಯಲ್ಲಿ ಅವರ ಕುಟುಂಬ ಇದೆ.












