ಸನ್ಮಾರ್ಗ ವಾರ್ತೆ
ವಾಷಿಂಗ್ಟನ್,ನ.20: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜಾರ್ಜಿಯ ರಾಜ್ಯದಲ್ಲಿ ಮರು ಮತ ಎಣಿಕೆ ನಡೆದು ಜೊ ಬೈಡನ್ರೆ ಗೆಲುವು ಸಾಧಿಸಿದ್ದಾರೆ. ಮತ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಟ್ರಂಪ್ ಆರೋಪ ಹೊರಿಸಿದ ಹಿನ್ನೆಲೆಯಲ್ಲಿ ಮರು ಮತ ಎಣಿಕೆ ನಡೆದಿತ್ತು.
ಜಾರ್ಜಿಯ ಸೆಕ್ರಟರಿ ಆಫ್ ಸ್ಟೇಟ್ ವೆಬ್ಸೈಟಿನಲ್ಲಿ ಮತ ಮರು ಎಣಿಕೆ ಪೂರ್ಣ ಗೊಂಡಿದೆ ಎಂಬ ಪ್ರಕಟಣೆ ಕಾಣಿಸಿಕೊಂಡಿದೆ. ಚುನವಣೆಯಲ್ಲಿ ಬೈಡನ್ ಗೆಲುವು ಸಾಧಿಸುವುದರೊಂದಿಗೆ ಮೂರು ದಶಕಗಳ ರಿಪಬ್ಲಿಕನ್ನರ ಆಧಿಪತ್ಯ ಇಲ್ಲಿ ನೆಲಕಚ್ಚಿದಂತಾಗಿದೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಬೈಡನ್ ಗೆದ್ದರೂ ಹಲವು ರಾಜ್ಯಗಳಲ್ಲಿ ಮತ ಮರು ಎಣಿಕೆ ನಡೆಯಬೇಕೆಂದು ಡೊನಾಲ್ಡ್ ಟ್ರಂಪ್ ಹೇಳಿದ್ದರು. ಬೈಡನ್ ಗೆದ್ದರೂ ಸೋಲೊಪ್ಪಲು ಟ್ರಂಪ್ ತಯಾರಾಗಿರಲಿಲ್ಲ.












