ಕೊರೋನ ಸೋಂಕಿತರಿಗೆ ಆಯುರ್ವೇದ ಚಿಕಿತ್ಸೆ ನೀಡಲು ಕೇರಳ ಸರಕಾರದಿಂದ ಅನುಮತಿ: ರೋಗಿಯ ಸಮ್ಮತಿ ಪಡೆಯುವಿಕೆ ಕಡ್ಡಾಯ

0
331

ಸನ್ಮಾರ್ಗ ವಾರ್ತೆ

ಕೊಚ್ಚಿ,ನ.20: ರಾಜ್ಯದಲ್ಲಿ ಕೊರೋನ ಪೀಡಿತರ ಚಿಕಿತ್ಸೆಗೆ ಅಯುರ್ವೇದವನ್ನು ಬಳಸಬಹುದು ಎಂದು ಕೇರಳ ಸರಕಾರ ಅನುಮತಿ ನೀಡಿದೆ. ಲಕ್ಷಣ ಗೋಚರಿಸದ ಕೊರೋನ ಪೀಡಿತರಿಗೆ ಮತ್ತು ಸಣ್ಣ ಮಟ್ಟದ ಲಕ್ಷಣ ಇರುವವರಿಗೆ ಅವರು ಒಪ್ಪುವುದಾದರೆ ಅಯುರ್ವೇದ ಚಿಕಿತ್ಸೆ ನೀಡಬಹುದು ಎಂದು ಕೇರಳ ಸರಕಾರ ಅನಮತಿ ನೀಡಿದದು ಫಸ್ಟ್ ಲೈನ್ ಟ್ರೀಟ್‍ಮೆಂಟ್ ಸೆಂಟರ್‍‌ಗಳಲ್ಲಿ ಮತ್ತು ಕೊರೋನ ಗುಣಮುಖವಾಗಿ ಕಂಡು ಬರುವ ಇತರ ದೈಹಿಕ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ಸೆಕೆಂಡರಿ ಲೆವೆಲ್ ಟ್ರೀಟ್‍ಮೆಂಟ್ ಸೆಂಟರ್‍ಗಳಲ್ಲಿರುವವರಿಗೆ ಅಯುರ್ವೇದ ಮದ್ದುಗಳನ್ನು ನೀಡಬಹುದು.

ರೋಗಿಯ ಒಪ್ಪಿಗೆ ಪಡೆದು ಆಯುರ್ವೇದಿಕ್ ಶುಶ್ರೂಷೆಯನ್ನು ಆಯುರ್ವೇದಿಕ್ ಸಂಸ್ಥೆಯ ತಜ್ಞರ ಮೇಲ್ನೋಟದಲ್ಲಿ ನಡೆಸಬಹುದು. ಇದಕ್ಕೆ ಒಬ್ಬರು ನೋಡಲ್ ಅಧಿಕಾರಿಯೂ ಇರಬೇಕು. ಏಳು ದಿನಗಳೊಳಗೆ ಚಿಕಿತ್ಸೆ ರೀತಿ ಆರಂಭಿಸಬೇಕೆಂದು ಸೂಚನೆ ನೀಡಲಾಗಿದೆ.

ಉಸಿರಾಟ ತೊಂದರೆ, ನ್ಯೂಮೇನಿಯ ಲಕ್ಷಣಗಳೂ, ಕೊರೋನದೊಂದಿಗೆ ಇತರ ಗಂಭೀರ ರೋಗಗಳು ಇರುವವರಿಗೆ ಯಾವುದೇ ಕಾರಣಕ್ಕೂ ಈ ಚಿಕಿತ್ಸೆ ಪಡೆಯುವ ಅನುಮತಿ ನೀಡಲಾಗಿಲ್ಲ. ಆಯುವೇದ ಮಾತ್ರೆ, ಕಶಾಯ, ಲೇಹ್ಯ, ಮುಂತಾದ ರೀತಿಯನ್ನು ಚಿಕಿತ್ಸೆಯಲ್ಲಿ ಉಪಯೋಗಿಸಲಾಗುವುದು.

ಕೊರೋನ ಚಿಕಿತ್ಸೆಗೆ ಅಲೋಪತಿಯ ಜೊತೆ ಇತರ ಚಿಕಿತ್ಸಾ ರೀತಿಯನ್ನು ಉಪಯೋಗಿಸಬೇಕೆಂದು ಅಯುರ್‍ವೇ-ಹೊಮಿಯೊ ವೈದ್ಯರು ನಿರಂತರ ಹೇಳುತ್ತಾ ಬಂದಿದ್ದರು. ಅಂತಿಮವಾಗಿ ಅಯುರ್ವೇದ ಮೆಡಿಕಲ್ ಅಸೋಸಿಯೇಶನ್ ಕೋರ್ಟಿನ ಮೊರೆ ಹೋಗಿತ್ತು. ಅಯುರ್ವೇದಕ್ಕೆ ಅನುಮತಿ ಸಿಕ್ಕಿದ ಆಧಾರದಲ್ಲಿ ಹೋಮಿಯೊ ಮೆಡಿಕಲ್ ಅಸೋಸಿಯೇಶನ್ ಕೂಡ ಸರಕಾರಕ್ಕೆ ಚಿಕಿತ್ಸೆಗೆ ಅನುಮತಿ ಕೋರಿ ಅರ್ಜಿಸಲ್ಲಿಸಿದೆ.