ಕೇಂದ್ರ ಸಚಿವ ಸದಾನಂದ ಗೌಡರಿಗೆ ಕೊರೋನ

0
412

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ನ.20: ಕೇಂದ್ರ ಸಚಿವ ಸದಾನಂದ ಗೌಡರಿಗೆ ಕೊರೋನ ದೃಢಪಟ್ಟಿದ್ದು ಅವರೇ ಟ್ವೀಟ್ ಮಾಡಿ ತಿಳಿಸಿದ್ದಾರೆ. ಕೊರೋನ ರೋಗ ಲಕ್ಷಣಗಳು ಗಮನಕ್ಕೆ ಬಂದೊಡನೆ ಪರೀಕ್ಷೆ ಮಾಡಿಸಿದ್ದೇನೆ. ಫಲಿತಾಂಶ ಪಾಸಿಟಿವ್ ಆಗಿದೆ. ಸ್ವಯಂ ಕ್ವಾರಂಟೈನ್‌ನಲ್ಲಿದ್ದೇನೆ. ತನ್ನೊಂದಿಗೆ ಸಂಪರ್ಕದಲ್ಲಿದ್ದವರು ಕ್ವಾರಂಟೈನ್‌ಗೊಳಗಾಗಬೇಕು. ಕೊರೋನ ಮಾನದಂಡಗಳನ್ನು ಪಾಲಿಸಬೇಕೆಂದು ಮನವಿ ಮಾಡಿದ್ದಾರೆ.

ಈ ಹಿಂದೆ ಕೇಂದ್ರ ಸಚಿವ ಅಮಿತ್ ಶಾ ಸಹಿತ ಕೇಂದ್ರ ಸಚಿವರಿಗೆ ಕೊರೋನ ದೃಢಪಟ್ಟಿತ್ತು. ಸಚಿವೆ ಸ್ಮೃತಿ ಇರಾನಿ, ಗಜೇಂದ್ರ ಸಿಂಗ್ ಶೇಖಾವತ್, ನಿತಿನ್ ಗಡ್ಕರಿ, ನಿರ್ಮಲಾ ಸೀತಾರಾಮನ್‌ರವರು ಶೀಘ್ರದಲ್ಲಿ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.