ಗಾಂಧೀಜಿಯವರ ಮರಿಮೊಮ್ಮಗ ಕೊರೋನದಿಂದ ನಿಧನ

0
649

ಸನ್ಮಾರ್ಗ ವಾರ್ತೆ

ಜೋಹಾನ್ಸ್‌ಬರ್ಗ್,ನ.23: ಮಹಾತ್ಮಾ ಗಾಂಧಿಯವರ ಮರಿಮೊಮ್ಮಗ ಸತೀಶ್ ದುಪೇಲಿಯ ಕೊರೋನದಿಂದ ಮೃತಪಟ್ಟಿದ್ದು 66ನೇ ವರ್ಷಕ್ಕೆ ಕಾಲಿಡುತ್ತಿರುವ ಅವರು ವೇಳೆ ಕೊನೆಯುಸಿರೆಳೆದರು ಎಂದು ವರದಿಯಾಗಿದೆ.

ನ್ಯೂಮೊನಿಯದಿಂದ ಬಳಲುತ್ತಿದ್ದ ಅವರು ಒಂದು ತಿಂಗಳಿಗಿಂತ ಹೆಚ್ಚು ಕಾಲ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ಕೊರೋನಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಯಿತ್ತೆಂದು ಅವರ ಸಹೋದರಿ ಉಮಾ ದುಪೇಲಿಯ ತಿಳಿಸಿದರು.

ಮಹಾತ್ಮಾ ಗಾಂಧಿಯ ದಕ್ಷಿಣಾಫ್ರಿಕದ ಚಟುವಟಿಕೆಗಳನ್ನು ಮಣಿಲಾಲ್ ಗಾಂಧಿ ಮುನ್ನಡೆಸಿದ್ದರು. ನಂತರ ಅವರ ನಂತರದ ತಲೆಮಾರು ಅದನ್ನು ವಹಿಸಿಕೊಂಡು ಮುನ್ನಡೆಸಿತು. ಸತೀಶ್ ಗಾಂಧೀಜಿಯರ ಪುತ್ರ ಮಣಿಲಾಲ್‍ರವರ ಮೊಮ್ಮಗ ಆಗಿದ್ದಾರೆ. ಡರ್ಬನ್‍ನ ಗಾಂಧಿ ಡೆವಲಪ್‍ಮೆಂಟ್ ಟ್ರಸ್ಟ್‌ಗೆ ಸಂಬಂಧಿಸಿದ ಹೊಣೆಗಾರಿಕೆಯನ್ನು ಅವರು ನಿರ್ವಹಿಸುತ್ತಿದ್ದರು‌.