ಮಧ್ಯಪ್ರದೇಶ: ಗೋ ಸಚಿವ ಸಂಪುಟದ ಬೆನ್ನಲ್ಲೇ ಗೋ ರಕ್ಷಣಾ ತೆರಿಗೆ

0
486

ಸನ್ಮಾರ್ಗ ವಾರ್ತೆ

ಭೋಪಾ,ನ.23: ಮಧ್ಯಪ್ರದೇಶದಲ್ಲಿ ಗೋ ಕ್ಯಾಬಿನೆಟ್‍ನ ಬೆನ್ನಲ್ಲೇ ಗೋ ರಕ್ಷಣಾ ತೆರಿಗೆಯನ್ನು ವಿಧಿಸಲಾಗುವುದು ಎಂದು ಮುಖ್ಯಮಂತ್ರಿ ಶಿವರಾಜ್ ಚೌಹಾನ್ ತಿಳಿಸಿದರು. ಗೋ ಪೋಷಣೆಗೆ ಹಣ ಸಂಗ್ರಹಿಸುವುದಕ್ಕಾಗಿ ಸೆಸ್ ಹಣವನ್ನು ಉಪಯೋಗಿಸಲಾಗುವುದು ಎಂದು ಅವರು ಹೇಳಿದರು.

ರವಿವಾರ ಆನ್‍ಲೈನ್‍ ಮೂಲಕ ಸೇರಿದ ಗೋ ಕ್ಯಾಬಿನೆಟ್‍ನ ಪ್ರಥಮ ಸಭೆಯಲ್ಲಿ ಅವರು ಮಾತಾಡುತ್ತಿದ್ದರು. ಗೋ ಶಾಲೆಗಳನ್ನು ಸಾಮಾಜಿಕ ಸಂಘಟನೆಗಳು ಮತ್ತು ಸ್ವಸಹಾಯ ಸಂಘಟನೆಗಳ ಬೆಂಬಲದೊಂದಿಗೆ ಸರಕಾರ ನಿರ್ವಹಿಸುತ್ತದೆ. ಗೋಪಾಲನೆ ಹೆಚ್ಚು ಹಣದ ಆವಶ್ಯಕತೆ ತಲೆದೋರಿದರೆ ಸೆಸ್ ವಿಧಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.

ಗೋ ಮಾತೆಯ ಸಂರಕ್ಷಣೆಗೆ ಮತ್ತು ಪರಿಪಾಲನೆಗೆ ಹಣಕ್ಕಾಗಿ ಸೆಸ್ ವಿಧಿಸುವ ಕುರಿತು ಚಿಂತನೆ ನಡೆಯುತ್ತದೆ. ಅದು ಸರಿಯಲ್ಲವೇ ಎಂದು ಚೌಹಾನ್ ಪ್ರಶ್ನಿಸಿದರು. ನಾವು ಮೊದಲ ರೊಟ್ಟಿ ದನಗಳಿಗೆ, ಕೊನೆಯ ರೊಟ್ಟಿ ನಾಯಿಗಳಿಗೂ ನೀಡುತ್ತೇವೆ. ಭಾರತೀಯ ಸಂಸ್ಕೃತಿಯಲ್ಲಿ ಪ್ರಾಣಿಗಳನ್ನು ಈ ರೀತಿ ನೋಡಿಕೊಳ್ಳಲಾಗುತ್ತಿತ್ತು. ಆದರೆ ಅದು ಈಗ ಇಲ್ಲವಾಗಿದೆ ಎಂದು ಚೌಹಾನ್ ಹೇಳಿದರು. ಗೋ ಸಂರಕ್ಷಣೆಗೂ ಗ್ರಾಮೀಣ ಆರ್ಥಿಕ ವ್ಯವಸ್ಥೆ ಬಲಪಡಿಸುವುದಕ್ಕಾಗಿ ಗೋ ಕ್ಯಾಬಿನೆಟ್ ರೂಪಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ಕಳೆದ ವಾರ ಗೋ ಕ್ಯಾಬಿನೆಟ್ ರಚನೆಯಾಗಿತ್ತು.