ಸನ್ಮಾರ್ಗ ವಾರ್ತೆ
ಟೆಹ್ರಾನ್,ನ.28: ಇರಾನಿನ ಹಿರಿಯ ಅಣು ವಿಜ್ಞಾನಿ ಮುಹ್ಸನ್ ಫಕ್ರಿಝಾದೇಹ್‍ರನ್ನು ಕೊಲೆ ಮಾಡಲಾಗಿದೆ. ಇರಾನಿನ ಅಧಿಕೃತ ಸುದ್ದಿ ಚ್ಯಾನೆಲ್ ಶುಕ್ರವಾರ ವಿಜ್ಞಾನಿಯ ಸಾವಿನ ವಿವರವನ್ನು ಬಹಿರಂಗಪಡಿಸಿದೆ.
ರಾಜಧಾನಿ ಟೆಹ್ರಾನಿನ ಸಮೀಪದ ಅವರು ಸಂಚರಿಸುತ್ತಿದ್ದ ಕಾರಿಗೆ ಭಯೋತ್ಪಾದಕರು ದಾಳಿ ನಡೆಸಿದರು. ಗಂಭೀರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಕರೆತರಲಾದರೂ ರಕ್ಷಿಸಲು ಸಾಧ್ಯವಾಗಿಲ್ಲ ಎಂದು ಇರಾನಿನ ರಕ್ಷಣಾ ಸಚಿವರು ತಿಳಿಸಿದ್ದಾರೆ. ಘಟನೆಯ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬುದಾಗಿ ಅನಧಿಕೃತ ಮೂಲಗಳಿಂದ ವರದಿಯಾಗಿದೆ.
ಇರಾನಿನ ರವೆಲ್ಯೂಶನರಿ ಗಾರ್ಡ್‌ನ ಹಿರಿಯ ವಿಜ್ಞಾನಿಯಾಗಿದ್ದ ಅವರು ಇರಾನ್‍ನ ಅಣು ಯೋಜನೆಯ ಮುಖ್ಯಸ್ಥರೂ ಆಗಿದ್ದರು.












