ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ನ.28: ಕೇಂದ್ರ ಸರಕಾರದ ರೈತ ಕಾನೂನಿ ವಿರುದ್ಧ ಪ್ರತಿಭಟಿಸುತ್ತಿರುವ ವಿವಿಧ ರಾಜ್ಯಗಳ ರೈತರ ದಿಲ್ಲಿ ಚಲೋ ರ್ಯಾಲಿಗೆ ಭಾರತದ ಕ್ರಿಕೆಟ್ ತಾರೆ ಹರ್ಭಜನ್ ಸಿಂಗ್ ಬೆಂಬಲ ಸೂಚಿಸಿ ಟ್ವೀಟ್ ಮಾಡಿದ್ದಾರೆ.
“ರೈತರು ನಮ್ಮ ಅನ್ನದಾತರು. ಅನ್ನ ಕೊಡುವವರಿಗೆ ನೀವು ಸಮಯ ಕೊಡಬೇಕು. ಅದು ನ್ಯಾಯವಲ್ಲವೇ? ಪೊಲೀಸ್ ಕ್ರಮಗಳಿಲ್ಲದೆ ಅವರನ್ನು ಆಲಿಸಲು ಆಗುವುದಿಲ್ಲವೇ? ರೈತರ ಬೇಡಿಕೆಯನ್ನು ದಯವಿಟ್ಟು ಆಲಿಸಿ” ಎಂದು ಹರ್ಭಜನ್ ಸಿಂಗ್ ಟ್ವೀಟ್ ಮಾಡಿದರು.
ರೈತರು ಪೊಲೀಸರಿಗೆ ಕುಡಿಯುವ ನೀರು ಕೊಡುತ್ತಿರುವ ಚಿತ್ರವನ್ನೂ ಹರ್ಭಜನ್ ಪೋಸ್ಟ್ ಮಾಡಿದ್ದಾರೆ. ಈ ಹಿಂದೆ ರೈತರ ಮಸೂದೆಯ ವಿರುದ್ಧ ಪಂಜಾಬ್‍ನಲ್ಲಿ ನಡೆದ ರೈತರ ಪ್ರತಿಭಟನೆಗೂ ಹರ್ಭಜನ್ ಸಿಂಗ್ ಬೆಂಬಲ ಸೂಚಿಸಿದ್ದರು. ರೈತರ ಕಷ್ಟ ತನಗೆ ಗೊತ್ತು. ಸಂತೋಷದ ದೇಶ ಬೇಕಾದರೆ ರೈತರನ್ನು ಸಂತೋಷ ಪಡಿಸಬೇಕೆಂದು ಅವರು ಹೇಳಿದ್ದಾರೆ
किसान हमारा अन्नदाता है । हम को अन्नदाता को थोड़ा समय देना चाहिए । क्या यह वाजिब नहीं होगा. बिना पुलिस भिड़ंत के क्या हम उनकी बात नहीं सुन सकते. कृपया किसान की भी सुनिए 🙏 जय हिंद 🙏🙏
— Harbhajan Turbanator (@harbhajan_singh) November 27, 2020
— Harbhajan Turbanator (@harbhajan_singh) November 28, 2020












