OLX ನಲ್ಲಿ ನಲ್ಲಿ ಮೋದಿಯ ವಾರಣಾಸಿ ಕಚೇರಿಯನ್ನು ಮಾರಾಟಕ್ಕಿಟ್ಟ ನಾಲ್ವರ ಬಂಧನ

0
718

ಸನ್ಮಾರ್ಗ ವಾರ್ತೆ

ವಾರಣಾಸಿ: ಪ್ರಧಾನಿ ನರೇಂದ್ರ ಮೋದಿಯ ವಾರಣಾಸಿಯ ಸಂಸದ ಕಚೇರಿಯನ್ನು OLX ಆ್ಯಪ್ ನಲ್ಲಿ ಮಾರಾಟಕ್ಕಿಟ್ಟ ಸಂಬಂಧ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿರುವ ಬಗ್ಗೆ ವರದಿಯಾಗಿದೆ.

ಬಂಧಿತ ಆರೋಪಿಗಳ ಸಂಪೂರ್ಣ ವಿವರ ಲಭ್ಯವಾಗಿಲ್ಲ. ಆರೋಪಿಗಳು ವಾರಾಣಸಿಯಲ್ಲಿರುವ ಮೋದಿಯವರ ಸಂಸದ ಕಚೇರಿಯ ಮಾರಾಟ ಜಾಹೀರಾತನ್ನು ಹಾಕಿ, ಇದು 6500 ಸ್ಕ್ವಾರ್ ಫೀಟ್ ಇದೆ, ಏಳು ಕೋಟಿ ಐವತ್ತು ಲಕ್ಷಕ್ಕೆ ಮಾರಾಟಕ್ಕಿದೆ ಎಂದು ಹಾಕಿದ್ದರು.

ಕಟ್ಟಡದ ಚಿತ್ರವೂ ಜಾಹೀರಾತಿನ ಜೊತೆಗಿದೆ. ನಾಲ್ಕು ಕೋಣೆ, ಬಾಲ್ಕು ಬಾತ್‍ರೂಮ್ ಇದೆ. 6,500 ಕಾರ್ಪೆಟ್ ಏರಿ ಇದೆ ಎಂದು ಜಾಹೀರಾತಿನಲ್ಲಿ ಹೇಳಲಾಗಿದೆ. ವಾರಣಾಸಿಯ ಲಕ್ಷ್ಮಿ ಕಾಂತಪುರಿಯಲ್ಲಿ ಪ್ರಧಾನಿಯ ಸಂಸದರ ಕಚೇರಿ ಇದೆ. ಲಕ್ಷ್ಮಿಕಾಂತ ಓಜ ಎಂಬ ಐಡಿಯಿಂದ ಜಾಹೀರಾತು ಪೋಸ್ಟ್ ಮಾಡಲಾಗಿದೆ. ಕಚೇರಿಯ ಫೋಟೊ ತೆಗೆದ ವ್ಯಕ್ತಿಯ ಸಹಿತ ಕೇಸಿಗೆ ಸಂಬಂದಿಸಿದ ನಾಲ್ವರನ್ನು ಬಂಧಿಸಲಾಗಿದೆ.

ಈ ಬಗ್ಗೆ ದೂರು ಸಿಕ್ಕ ಕೂಡಲೇ ಜಾಹೀರಾತು ತೆಗೆದು ಹಾಕಲಾಗಿದ್ದು, ತನಿಖೆ ಮುಂದುವರಿಯುತ್ತಿದೆ ಎಂದು ವಾರಣಾಸಿ ಎಸ್ ಎಸ್‍ಪಿ ಅಮಿತ್ ಕುಮಾರ್ ಪಾಠಕ್ ತಿಳಿಸಿದ್ದಾರೆ.