ಸನ್ಮಾರ್ಗ ವಾರ್ತೆ
ಸಾವೊಪಾವ್ಲೊ: ಜಗತ್ತಿನಾದ್ಯಂತ ಚರ್ಚೆಯಲ್ಲಿರುವ ಕೊರೋನಾ ವ್ಯಾಕ್ಸಿನ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಬ್ರೆಝಿಲ್ ಅಧ್ಯಕ್ಷ ಝೆಯಿರ್ ಬೊಲ್ಸೊನೊರೊ, ಕೊರೋನಾ ವ್ಯಾಕ್ಸಿನ್ ಜನರನ್ನು ಮೊಸಳೆಯನ್ನಾಗಿ ಮಾಡಬಹುದು. ಅದಕ್ಕೆ ನಾನು ಜವಾಬ್ದಾರನಲ್ಲ ಎಂದಿದ್ದಾರೆ.
ಕೊರೋನಾ ವ್ಯಾಕ್ಸಿನ್ ಬಗ್ಗೆ ಮತ್ತೆ ಗುಡುಗಿರುವ ಅವರು, ವ್ಯಾಕ್ಸಿನ್ ಜನರನ್ನು ಮೊಸಲೆಯನ್ನಾಗಿ ಮಾಡಬಹುದು. ಮಹಿಳೆಯರನ್ನು ಗಡ್ಡ ಇರುವವರನ್ನಾಗಿ ಮಾಡಬಹುದು ಎಂದು ಹೇಳಿದ್ದಾರೆ.
ಕೊರೊನ ವ್ಯಾಕ್ಸಿನ್ ಬಳಸಿಕೊಂಡಾಗ ಅಡ್ಡ ಪರಿಣಾಮವಾದಲ್ಲಿ ನಾನು ಜವಾಬ್ದಾರಿಯಲ್ಲ. ವ್ಯಾಕ್ಸಿನ್ ಬಳಸಿ ನೀವೊಂದು ಮೊಸಲೆಯಾಗಿ ಬದಲಾದರೆ ಅದಕ್ಕೆ ನೀವೆ ಹೊಣೆ. ಅಥವಾ ಕೊರೋನಾ ವ್ಯಾಕ್ಸಿನ್ ಉಪಯೋಗಿಸುವವರಿಗೆ ದೈತ್ಯ ಶಕ್ತಿ ಸಿಗಬಹುದು. ಕೆಲವೊಮ್ಮೆ ಮಹಿಳೆಯರಿಗೆ ಗಡ್ಡ ಬರಬಹುದು. ಮಹಿಳೆಯರ ಧ್ವನಿ ಪುರುಷರಂತಾಗಬಹುದು ಎಂದು ವ್ಯಾಕ್ಸಿನ್ ತಯಾರಿಸಲು ಪ್ರಯತ್ನ ಪಡುತ್ತಿರುವ ಕಂಪೆನಿಗಳನ್ನು ಉದ್ದೇಶಿಸಿ ಈ ರೀತಿಯ ಹೇಳಿಕೆಯನ್ನು ಬೊಲ್ಸೊನಾರೊ ನೀಡಿದ್ದಾರೆ.
ಜವಾಬ್ದಾರಿಯುತ ಸ್ಥಾನದಲ್ಲಿ ಕೂತು ಇಂತಹ ಹೇಳಿಕೆ ನೀಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಒಳಗಾಗಿದೆ.












