ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ರೈತರ ಬೆಳೆಗಳಿಗೆ ಲಭಿಸಬೇಕಾದ ಮೂಲ ಬೆಂಬಲ ಬೆಲೆಯನ್ನು ಯಾರಾದರೂ ತೆಗೆದು ಹಾಕಲು ಯತ್ನಿಸಿದರೆ ತಾನು ರಾಜಕೀಯ ತೊರೆಯುವ ಎಂದು ಬಿಜೆಪಿ ನಾಯಕ, ಹರಿಯಾಣ ಮುಖ್ಯಮಂತ್ರಿ ಮನೋಹರಲಾಲ್ ಕಟ್ಟರ್ ಹೇಳಿದ್ದಾರೆ.
ಹರಿಯಾಣದ ನರ್‍ನಾಲ್‍ನಲ್ಲಿನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಮೂಲ ಬೆಂಬಲ ಬೆಲೆ ಹಾಗೆಯೇ ಇರುತ್ತದೆ. ಯಾರಾದರೂ ಅದನ್ನು ತೆಗೆದು ಹಾಕಲು ಯತ್ನಿಸಿದರೆ ಮನೋಹರಲಾಲ್ ಕಟ್ಟರ್ ರಾಜಕೀಯ ಕೊನೆಗೊಳಿಸುತ್ತಾರೆ. ಮೂಲ ಬೆಂಬಲ ಬೆಲೆಯನ್ನು ಯಾರೂ ಇಲ್ಲದಂತೆ ಮಾಡುವುದಿಲ್ಲ. ಎಂಎಸ್‍ಪಿ ಮೊದಲೇ ಅಲ್ಲಿತ್ತು. ಈಗಲೂ ಇದೆ. ಭವಿಷ್ಯದಲ್ಲಿಯೂ ಇರುವುದು ಎಂದು ಕಟ್ಟರ್ ಹೇಳಿದರು.
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‍ರನ್ನು ಕಟ್ಟರ್ ಶನಿವಾರ ಭೇಟಿಯಾಗಿದ್ದರು. ರೈತರ ಹೋರಾಟ ಕೊನೆಗೊಳಿಸುವ ಪ್ರಧಾನ ದಾರಿ ಮಾತುಕತೆ. ರೈತರೊಂದಿಗೆ ಮಾತುಕತೆಗೆ ಕೇಂದ್ರ ಸರಕಾರ ಸಿದ್ಧ ಎಂದು ಕಟ್ಟರ್ ಶನಿವಾರ ಎಎನ್‍ಐಗೆ ತಿಳಿಸಿದ್ದರು.












