ಸನ್ಮಾರ್ಗ ವಾರ್ತೆ
ಒಟ್ಟೊವ: ಹೊಸ ಕೊರೋನಾ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಇಂಗ್ಲೆಂಡಿನ ವಿಮಾನಗಳಿಗೆ ಕೆನಡಾ ಸರಕಾರವು ಪ್ರವೇಶಿಸದಂತೆ ತಡೆ ನೀಡಿದೆ.
ವಾಣಿಜ್ಯ, ಪ್ರಯಾಣಿಕ ವಿಮಾನಗಳಿಗೆ 72 ಗಂಟೆಗಳ ತಾತ್ಕಾಲಿಕ ನಿಷೇಧ ಹೇರಿದೆ. ಇಂದು ಮಧ್ಯರಾತ್ರಿ ಯಿಂದ ನಿಷೇಧ ಪ್ರಾಬಲ್ಯಕ್ಕೆ ಬರುತ್ತಿದೆ.
ಕೆನಡದ ರಿಪಬ್ಲಿಕ್ ಹೆಲ್ತ್ ಏಜೆನ್ಸಿ ಶಿಫಾರಸು ಪ್ರಕಾರ ಮುಂಜಾಗ್ರತಾ ಅಂಗವಾಗಿ ಈ ಕ್ರಮ ಎಂದು ಪ್ರಧಾನಿ ಜಸ್ಟಿನ್ ಟ್ರೂಡೊ ತಿಳಿಸಿದ್ದಾರೆ.
ಇಂಗ್ಲೆಂಡಿನಿಂದ ರವಿವಾರ ಬಂದ ವಿಮಾನ ಯಾತ್ರಿಗಳಿಗೆ ಆರೋಗ್ಯ ತಪಾಸಣೆ ಹಾಗೂ ಕ್ವಾರಂಟೈನ್ ಸೌಕರ್ಯಗಳನ್ನು ಅಧಿಕಾರಿಗಳು ಮಾಡಿಕೊಟ್ಟರು. ನೆದರ್‍ಲೆಂಡ್ , ಬೆಲ್ಜಿಯಂಗಳು ಕೂಡ ಇಂಗ್ಲೆಂಡಿನ ವಿಮಾನಗಳಿಗೆ ನಿಷೇಧ ಹೇರಿವೆ. ಫ್ರಾನ್ಸ್, ಇಟಲಿ, ಜರ್ಮನಿ ಕೂಡ ಇದೇ ಯೋಚನೆಯಲ್ಲಿದೆ.
ಕಳೆದ ದಿನ ಲಂಡನ್‍ನಿಂದ ರೋಮ್ ಗೆ ಬಂದ ಜನರಲ್ಲಿ ಹೊಸ ವೈರಸ್ ಕಂಡು ಬಂದಿತ್ತು. ಇಂಗ್ಲೆಂಡಿನಲ್ಲಿ ಹೊಸ ಕೊರೋನಾ ಬಾಧಿಸಿದ ಸಾವಿರಕ್ಕೂ ಹೆಚ್ಚು ರೋಗಿಗಳಿದ್ದಾರೆ. ಲಂಡನ್ ಉತ್ತರ- ಪೂರ್ವ ಇಂಗ್ಲೆಂಡಿನಲ್ಲಿ ವೈರಸ್ ತ್ವರಿತಗತಿಯಲ್ಲಿ ಹರಡುತ್ತಿದೆ.












