ಸನ್ಮಾರ್ಗ ವಾರ್ತೆ
ಮುಂಬೈ: ನಗರದ ಡ್ರಾಗನ್ ಫ್ಲೈ ಕ್ಲಬ್ ಮೇಲೆ ಪೊಲೀಸರು ನಡೆಸಿದ ದಾಳಿಯಲ್ಲಿ ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ, ಗಾಯಕ ಗುರು ರಾಂಧವ, ಬಾಲಿವುಡ್ ಸೆಲೆಬ್ರಿಟಿ ಹಾಗೂ ಹೃತಿಕ್ ರೋಶನ್ ನ ಮಾಜಿ ಪತ್ನಿ ಸುಸಾನ್ನೆ ಖಾನ್ ಮುಂತಾದ ಪ್ರಮುಖರನ್ನು ಪೊಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿದೆ.
ಕೊರೋನಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಬಂಧನ ನಡೆದಿದ್ದು, ಇವರನ್ನು ನಂತರ ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಯಿತು.

ಮುಂಬೈ ಕ್ಲಬ್‍ನ ಏಳು ಸ್ಟಾಫ್‍ಗಳ ಸಹಿತ 34 ಮಂದಿ ಬಂಧನಕ್ಕೊಳಗಾಗಿದ್ದಾರೆ. ಕೊರೋನಾ ನಿಬಂಧನೆ ಉಲ್ಲಂಘನೆ ಮಾಡಿದ್ದಕ್ಕಾಗಿ ಮತ್ತು ಹೇಳಿದ ಸಮಯಕ್ಕಿಂತ ಹೆಚ್ಚು ಸಮಯ ಪಬ್ ತೆರೆದಿಟ್ಟದ್ದು ಕ್ರಮ ಕೈಗೊಳ್ಳಲು ಕಾರಣವೆಂದು ಸಹಾರ್ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ಹೇಳಿದರು.
ಸಾರ್ವಜನಿಕ ಸೂಚನೆಗಳನ್ನು ಉಲ್ಲಂಘಿಸಿದ್ದಕ್ಕಾಗಿ 188 ಸೆಕ್ಷನ್ ಪ್ರಕಾರ ಜೀವಕ್ಕೆ ಬೆದರಿಕೆಯಾದ ರೋಗಗಳನ್ನು ಅರಿತು ಅರಿಯದೆ ಹರಡಲು ಶ್ರಮಿಸಿದ್ದಕ್ಕೆ 269 ನೇ ವಿಧಿಯನ್ವಯ ಇವರ ವಿರುದ್ಧ ಕೇಸ್ ದಾಖಲಾಗಿದೆ.
ಬ್ರಿಟನ್‍ನಲ್ಲಿ ಕೊರೊನ ವೈರಸ್‍ನ ಹೊಸ ಪ್ರಭೇದ ಕಂಡು ಬಂದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರಕಾರ ಮುನ್ಸಿಪಾಲಿಟಿ ವ್ಯಾಪ್ತಿಯಲ್ಲಿ ರಾತ್ರಿ ವೇಳೆಯಲ್ಲಿ ಕರ್ಫ್ಯೂ ಹೇರಿದೆ.
ಹೊಸ ವರ್ಷಆಚರಣೆ ನಡೆಯುವ ಹಿನ್ನೆಲೆಯಲ್ಲಿ ಡಿಸೆಂಬರ್ 22ರಿಂದ ಜನವರಿ 5ರ ವರೆಗೆ ರಾಜ್ಯದಲ್ಲಿ ಸಾರ್ವಜನಿಕ ಕಾರ್ಯಕ್ರಮಕ್ಕೆ ನಿಯಂತ್ರಣ ವಿಧಿಸಲು ಸರಕಾರ ನಿರ್ಧರಿಸಿದೆ.












