ಸನ್ಮಾರ್ಗ ವಾರ್ತೆ
ಪಶ್ಚಿಮ ಬಂಗಾಳ: ಕಳೆದ ಹಲವಾರು ದಿನಗಳಿಂದ ಸುದ್ದಿಯಲ್ಲಿರುವ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಕಾವು ಬಿಜೆಪಿ ಬಂದ ಬಳಿಕ ದೇಶದ ಗಮನ ಸೆಳೆದಿದೆ. ಅಲ್ಲದೇ ಮಮತಾ ಬ್ಯಾನರ್ಜಿಯವರ ಟಿಎಂಸಿ ಪಕ್ಷದಿಂದ ಹಲವಾರು ಶಾಸಕರು ಕೇಂದ್ರ ಗೃಹ ಸಚಿವ ಅಮಿತ್ ಷಾ ರವರ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು.
ಈ ಬಾರಿ ಹೇಗಾದರೂ ಮಾಡಿ ಪ.ಬಂಗಾಳದ ಗದ್ದುಗೆ ಏರಲೇಬೇಕೆಂದು ಪಣತೊಟ್ಟಿರುವ ಬಿಜೆಪಿ, ಈಗಾಗಲೇ ಮತಬೇಟೆಯನ್ನು ಬಂಗಾಳದಲ್ಲಿ ಆರಂಭಿಸಿದೆ.
ಈ ಮಧ್ಯೆ ಕಲ್ಲಿದ್ದಲು ಮಾಫಿಯಾಕ್ಕೆ ಸಂಬಂಧಿಸಿದ ಜನರು ಪಕ್ಷಕ್ಕೆ ಪ್ರವೇಶಿಸುವುದನ್ನು ವಿರೋಧಿಸಿದ್ದಕ್ಕಾಗಿ ಬಿಜೆಪಿಯ ಕಾರ್ಯಕರ್ತರ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದ ಘಟನೆ ವರದಿಯಾಗಿದೆ.
ಪ. ಬಂಗಾಳದ ಬುರ್ದ್ವಾನ್ ಜಿಲ್ಲೆಯ ದುರ್ಗಾಪುರದಲ್ಲಿ ಆಯೋಜಿಸಿದ್ದ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದ್ದು, ಕಾರ್ಯಕ್ರಮ ಆರಂಭಕ್ಕೆ ಮುನ್ನ ಇದು ಸಂಭವಿಸಿದೆ ಎಂದು ವರದಿಯಾಗಿದೆ.
ಈ ಕಾರ್ಯಕ್ರಮಕ್ಕೆ ಪಶ್ಚಿಮ ಬಂಗಾಳ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಸೇರಿದಂತೆ ಅನೇಕ ಘಟಾನುಘಟಿ ನಾಯಕರು ಭಾಗವಹಿಸುವವ ರಿದ್ದರು. ಆದರೆ ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ಬಿಜೆಪಿಯ ಹೊಸ ಕಾರ್ಯಕರ್ತರು ಮತ್ತು ಹಳೆಯ ಕಾರ್ಯಕರ್ತರ ಮಧ್ಯೆ ವೇದಿಕೆಯಲ್ಲೇ ಅಸಮಾಧಾನ ಉಂಟಾಗಿದ್ದು, ಪರಸ್ಪರ ಬೈದಾಡಿಕೊಂಡಿದ್ದಾರೆ. ಬಳಿಕ ಮಾತುಕತೆ ಜಗಳಕ್ಕೆ ತಿರುಗಿ ಕಾರ್ಯಕರ್ತರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ಜಗಳ ವಿಕೋಪಕ್ಕೆ ತಿರುಗಿ ಅಲ್ಲೇ ಹಾಕಲಾಗಿದ್ದ ಚಯರ್ಗಳನ್ನು ಎತ್ತಿ ಹೊಡೆದಾಡಿಕೊಂಡಿದ್ದಾರೆ. ಹಲವು ಕುರ್ಚಿಗಳು ತುಂಡಾಗಿದ್ದು, ಇದೀಗ ಜಗಳದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
#Breaking: Clashes erupt between new & old BJP cadres in Durgapur, Burdwan district. Ahead of BJP joining program at Durgapur, old & new cadres clashed with each other on the dias before the arrival of Bengal BJP President Dilip Ghosh @ZeeNews pic.twitter.com/Lev1zwuMKC
— Pooja Mehta (@pooja_news) December 21, 2020












