ಮುಸ್ಲಿಮ್ ಸಮುದಾಯ ಓರ್ವ ನಾಯಕನನ್ನು ಕಳೆದುಕೊಂಡಿದೆ: ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ.‌ಅಶ್ರಫ್ ಸಂತಾಪ

0
850

ಸನ್ಮಾರ್ಗ ವಾರ್ತೆ

ಮಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಕೋಶಾಧಿಕಾರಿ, ಕಾರ್ಯಕಾರಿಣಿ ಸಮಿತಿ ಸದಸ್ಯರಾದ, ದ.ಕ.ಮೂಲದ ಕೆ.ಎಂ. ಶರೀಫ್ ರವರು ಇಂದು ಮಂಗಳೂರಿನಲ್ಲಿ ನಿಧನ ಹೊಂದಿದ್ದು, ಮುಸ್ಲಿಮ್ ಸಮುದಾಯ ಓರ್ವ ಸಕ್ರಿಯ ನಾಯಕನನ್ನು ಕಳೆದುಕೊಂಡಿದೆ ಎಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ, ಮಾಜಿ ಮೇಯರ್ ಕೆ.ಅಶ್ರಫ್ ಸಂತಾಪ ಸೂಚಿಸಿದ್ದಾರೆ.

ಷರೀಫ್ ರವರ ನಿಧನದಿಂದ ಜಿಲ್ಲೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುತ್ತಿದ್ದ ಸಾಮುದಾಯಿಕ ಸಂಘಟನೆಯ ಒಂದು ಕೊಂಡಿಯನ್ನು ಜಿಲ್ಲೆಯ ಜನತೆ ಕಳೆದುಕೊಂಡಿದೆ. ಷರೀಫ್ ರವರ ನಿಧನಕ್ಕೆ ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ ಎಂದು ತಿಳಿಸಿರುವ ಅವರು, ಮೃತರ ಮಗ್ ಫಿರತ್ ಗಾಗಿ ಸರ್ವರೂ ಪ್ರಾರ್ಥಿಸಬೇಕು ಎಂದು ಕೆ.ಅಶ್ರಫ್ ತಿಳಿಸಿದ್ದಾರೆ.