ಸನ್ಮಾರ್ಗ ವಾರ್ತೆ
ಕಾಬೂಲ್,ಡಿ.25: ಅಫ್ಘಾನಿಸ್ತಾನದ ಮಹಿಳಾ ಹಕ್ಕುಗಳಿಗಾಗಿ ಹೋರಾಡುತ್ತಿರುವ ಸಾಮಾಜಿಕ ಕಾರ್ಯಕರ್ತೆ ಫ್ರೇಶ್ತ ಕೊಹಿಸ್ತಾನಿ ಗುಂಡಿಗೆ ಬಲಿಯಾಗಿದ್ದು ಅಫ್ಘಾನಿಸ್ತಾನದ ಕೊಹಿಸ್ತಾನ ಜಿಲ್ಲೆಯ ಕಪಿಸ ಪ್ರಾಂತದಲ್ಲಿ ದಾರುಣ ಘಟನೆನಡೆದಿದೆ. ದ್ವಿಚಕ್ರ ವಾಹನದಲ್ಲಿ ಬಂದ ಆಯುಧಾರಿಗಳು ಫ್ರೇಶ್ತಾರ ಮೇಲೆ ಗುಂಡಿನ ಸುರಿಮಳೆಗೈದಿದ್ದಾರೆ. ಫ್ರೇಶ್ತಾರ ಸಹೋದರನಿಗೂ ಗುಂಡಿನ ದಾಳಿಯಲ್ಲಿ ಗಾಯಗಳಾಗಿವೆ. ಘಟನೆಯಲ್ಲಿ ಗುಪ್ತಚರ ವಿಭಾಗ ತನಿಖೆ ಆರಂಭಿಸಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.
ಇತ್ತೀಚೆಗೆ ಪತ್ರಕರ್ತ ರಹ್ಮತುಲ್ಲ ನಿಕ್ಸಾದ್, ಫ್ರೀ ಆಂಡ್ ಫಯರ್ ಇಲಕ್ಷನ್ ಫಾರಂ ಆಫ್ ಅಫ್ಘಾನ್ ಮುಖ್ಯಸ್ಥ ಯೂಸುಫ್ ರಶೀದ್ ಕೊಲೆಯಾಗಿದ್ದರು. ಜರ್ನಲಿಸ್ಟ್ ಯೂನಿಯನ್ ನಾಯಕರಾದ ರಹ್ಮತುಲ್ಲ, ಗಝನಿ ಪ್ರಾಂತದಲ್ಲಿ ಕೊಲೆಯಾಗಿದ್ದಾರೆ.












