ಇಂದು ಅವರ ವಕೀಲರನ್ನು ಹುಡುಕಿ ಬಂದರು, ನಾಳೆ ನಿಮ್ಮನ್ನೂ ಹುಡುಕಿ ಬಂದಾರು, ಒಗ್ಗಟ್ಟಿನಿಂದ ಹೋರಾಡಬೇಕಿದೆ- ಪ್ರಶಾಂತ್ ಭೂಷಣ್

0
954

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಡಿ.25: ದಿಲ್ಲಿ ಗಲಭೆ ಪ್ರಕರಣದಲ್ಲಿ ಬಲಿಯಾದವರ ಪರ ಹಾಜರಾಗುತ್ತಿರುವ ಹಿರಿಯ ವಕೀಲ ಮಹ್ಮೂದ್ ಪ್ರಾಚರ ಕಚೇರಿಗೆ ದಿಲ್ಲಿ ಪೊಲೀಸರು ನಡೆಸಿದ ದಾಳಿಯನ್ನು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಕಟುವಾಗಿ ಟೀಕಿಸಿದ್ದಾರೆ. ಇದರ ವಿರುದ್ಧ ನಾವು ಒಗ್ಗಟ್ಟಿನಿಂದ ಹೋರಾಡಬೇಕೆಂದು ಅವರು ಹೇಳಿದರು. ಮೊದಲು ಅವರು ಆಕ್ಟಿವಿಸ್ಟ್‌ಗಳನ್ನು ಹುಡುಕಿ ಬಂದರು. ನಂತರ ವಿದ್ಯಾರ್ಥಿಗಳನ್ನು ಹುಡುಕಿ ಬಂದರು. ಈಗ ರೈತರನ್ನು ಹುಡುಕಿ ಬಂದಿದ್ದಾರೆ. ಈಗ ವಕೀಲರನ್ನು ಹುಡುಕಿ ಬಂದರು. ಮುಂದಕ್ಕೆ ನಿಮ್ಮನ್ನು ಹುಡುಕಿಕೊಂಡು ಬರಬಹುದು. ಇದು ಪ್ರಜಾಪ್ರಭುತ್ವ ವ್ಯವಸ್ಥೆಯೆಂದು ನಿಮಗೆ ಹೇಳಲು ಸಾಧ್ಯವಿದೆಯೇ. ನಾವು ಇದರ ವಿರುದ್ಧ ಒಗ್ಗಟ್ಟಿನಿಂದ ಹೋರಾಡಬೇಕಾಗಿದೆ ಎಂದು ಪ್ರಶಾಂತ್ ಭೂಷಣ್ ಹೇಳಿದರು.ಮ

ಕಾನೂನು ತಜ್ಞರ ಹಕ್ಕುಗಳ ಮೇಲಿನ ದಾಳಿಯಿದು ಎಂದು ವಕೀಲೆ ಇಂದಿರಾ ಜೈಸಿಂಗ್ ಹೇಳಿದರು. ಈ ಅಕ್ರಮದ ವಿರುದ್ಧ ವಕೀಲರು ಪ್ರತಿಭಟಿಸಬೇಕೆಂದು ಅವರು ಹೇಳಿದರು. ವಕೀಲ ಮಹ್ಮೂದ್ ಪ್ರಾಚರ ದಿಲ್ಲಿ ನಿಝಾಮುದ್ದೀನ್ ಕಚೇರಿಗೆ ಮಧ್ಯಾಹ್ನ 12:30ಕ್ಕೆ ದಾಳಿ ನಡೆದಿದ್ದು ರಾತ್ರೆಯವರೆಗೂ ಮುಂದುವರಿದಿದೆ. ನಕಲಿ ದಾಖಲೆಗಳನ್ನು ಹುಡುಕಲು ದಾಳಿ ನಡೆದಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಪ್ರಾಚರ ಕಚೇರಿಯ ಲ್ಯಾಪ್‍ಟಾಪ್, ಇ-ಮೇಲ್ ಪಾಸ್‍ವರ್ಡ್‌ಗಳನ್ನು ಪೊಲೀಸರು ಕೇಳಿದ್ದಾರೆ. ಇದರ ಕುರಿತು ಮಹ್ಮೂದ್ ಪ್ರಾಚ ಮತ್ತು ಅಧಿಕಾರಿಗಳು ಪರಸ್ಪರ ಮಾತಾಡುತ್ತಿರುವುದರ ವೀಡಿಯೊ ಹೊರಬಂದಿದೆ.